ಅರ್ಮೇನಿಯಾದಲ್ಲಿ 41 ಹೊಸ ಕೊರೋನಾ ವೈರಸ್ ಪತ್ತೆ; ಪ್ರಧಾನಿ

ಯೆರೆವನ್, ಮಾ 24, ಅರ್ಮೇನಿಯಾದಲ್ಲಿ ಸೋಮವಾರ ಹೊಸ 40 ಕರೋನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ ಎಂದು ಅಲ್ಲಿನ ಪ್ರಧಾನಿ ನಿಕೋಲ್ ಪಷ್ನಿಯಾನ್  ಹೇಳಿದ್ದಾರೆ. ಫೇಸ್ ಬುಕ್ ನಲ್ಲಿ ಹಂಚಿಕೊಂಡು ವಿಡಿಯೋ ಸಂದೇಶದಲ್ಲಿ ಅವರು, ಇಂದು 41 ಹೊಸ ಪ್ರಕರಣಗಳು ಪತ್ತೆಯಾಗಿವೆ.  ದೇಶದಲ್ಲಿ ಪತ್ತೆಯಾಗಿರುವ 235 ಜನರಲ್ಲಿ 26 ಜನರಲ್ಲಿ ನ್ಯುಮೋನಿಯಾ ಕಂಡುಬಂದಿದೆ. ಕೋಟ್ಯಕ್ ಪ್ರಾಂತ್ಯ ಮತ್ತು ಯೆರೆವನ್ ನಲ್ಲಿ ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದು ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಕೊರೋನಾ ವೈರಾಣು ಸೋಂಕು ಹರಡುವುದನ್ನು ತಡೆಯಲು ಲಾಕ್ ಡೌನ್ ಘೋಷಿಸಲಾಗಿದೆ.