ಬಾಲಾಜಿ ದೇವಸ್ಥಾನದ 40ನೇ ವಾರ್ಷಿಕೋತ್ಸವ
40th anniversary of Balaji Temple
ಲೋಕದರ್ಶನ ವರದಿ
ಬೆಟಗೇರಿ 30 : ಸುಮಾರು 91 ವರ್ಷಗಳ ಹಿಂದೆ ಬೆಟಗೇರಿ ರಜಪೂತ ಗಲ್ಲಿಯಲ್ಲಿ ಚಿಕ್ಕದಾಗಿ ಶ್ರೀ ಬಾಲಾಜಿ ದೇವಸ್ಥಾನ ನಿರ್ಮಿಸಿದ್ದರು. ಸಮಾಜ ಬಾಂಧವರ, ಸದ್ಭಕ್ತರ ಸಹಾಯ ಸಹಕಾರದಿಂದ 1987 ರಲ್ಲಿ ದೇವಸ್ಥಾನ ನವೀಕರಣಗೊಂಡು ಹೊಸದಾಗಿ ಮೂರ್ತಿ ಪ್ರತಿಷ್ಠಾಪನೆಗೊಂಡಿತು. ದಿನಾಂಕ 28-4-2026 ಮಂಗಳವಾರ ಅದರ 40ನೇ ವಾರ್ಷಿಕೋತ್ಸವವು ಜರುಗಿತು ಅದರಂಗವಾಗಿ ಅಂದು ಮುಂಜಾನೆ ವಿಶೇಷ ಪೂಜೆ, ಹುಬ್ಬಳ್ಳಿ ರಜಪೂತ ಮಹಿಳಾ ಮಂಡಳದವರಿಂದ 11 ಗಂಟೆಗೆ ವಿಷ್ಣು ಸಹಸ್ರನಾಮಾವಳಿ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಪ್ರಸಾದ ವ್ಯವಸ್ಥೆ (ಅನ್ನಸಂತರೆ್ಣ) ಜರುಗಿತು. ನೂರಾರು ಸದ್ಭಕ್ತರು ಪ್ರಸಾದವನ್ನು ಸ್ವೀಕರಿಸಿ ಬಾಲಾಜಿ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಗದಗ-ಬೆಟಗೇರಿ ರಜಪೂತ ಸಮಾಜದ ಸಮಸ್ತ ಹಿರಿಯರು, ಯುವಕರು, ಮಹಿಳೆಯರು ಹಾಗೂ ಸದ್ಭಕ್ತರು ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಗದಗ ಬೆಟಗೇರಿ ರಜಪೂತ ಸಮಾಜದ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಅಭಿನಂದನೆ ಸಲ್ಲಿಸಿದ್ದಾರೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 