ಬಂಡಿವಾಡ ಗ್ರಾಮದ ಹನಮಂತ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣಕ್ಕೆ 40 ಲಕ್ಷ ಹಣ ಜಮಾ: ಶಾಸಕ ಎನ್‌.ಹೆಚ್‌. ಕೋನರಡ್ಡಿ

ಬಂಡಿವಾಡ ಗ್ರಾಮದ ಹನಮಂತ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣಕ್ಕೆ 40 ಲಕ್ಷ ಹಣ ಜಮಾ: ಶಾಸಕ ಎನ್‌.ಹೆಚ್‌. ಕೋನರಡ್ಡಿ  40 lakhs deposited for the construction of a new building of Hanuman Temple in Bandiwada village: ML

ಲೋಕದರ್ಶನ ವರದಿ 

         ಹುಬ್ಬಳ್ಳಿ 04 : ಪ್ರಸಿದ್ಧ ಬಂಡಿವಾಡ ಹನಮಂತ ದೇವರು ಕೇಳಿದವರವನ್ನು ಕರುಣಿಸುವ ಹುಬ್ಬಳ್ಳಿ ತಾಲ್ಲೂಕಿನ ಬಂಡಿವಾಡ ಗ್ರಾಮದ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣ ಮಾಡಲು 40 ಲಕ್ಷ ಅನುದಾನವನ್ನು ಜಿಲ್ಲಾಧಿಕಾರಿಗಳ ಖಾತೆಗೆ ಜಮೆಮಾಡಲಾಗಿದೆ ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್‌.ಹೆಚ್‌. ಕೋನರಡ್ಡಿ ಹೇಳಿದರು.  

ಅವರು ಪ್ರತಿವರ್ಷದಂತೆ ಹನುಮ ಜಯಂತಿಯ ಅಂಗವಾಗಿ ದೇವಸ್ಥಾನಕ್ಕೆ ತೆರಳಿ ಜಾತ್ರಾ ಮಹೋತ್ಸವದ ಅಂಗವಾಗಿ ದರ್ಶನ ಪಡೆದು ಮಾತನಾಡಿದ ಅವರು ಸಾಕಷ್ಟು ಭಕ್ತರನ್ನು ಹೊಂದಿದ ಬಂಡಿವಾಡ ಗ್ರಾಮದ ಹನುಮಂತ ದೇವರ ದೇವಸ್ಥಾನವಾಗಿದ್ದು ನೂತನ ಕಟ್ಟಡಕಟ್ಟಲು ಭಕ್ತಾಧಿಗಳು ನಿರ್ಧರಿಸಿದ್ದು ಸಾಕಷ್ಟು ಭಕ್ತರು ದೇಣಿಗೆ ನೀಡುತ್ತಿದ್ದಾರೆ.

         ಈ ದೇವಸ್ಥಾನಕ್ಕೆ ಸರ್ಕಾರದಿಂದ 40 ಲಕ್ಷ ಅನುದಾನ ಮಂಜೂರು ಮಾಡಿಸಿದ್ದು ಇದೀಗ ಜಿಲ್ಲಾಧಿಕಾರಿಗಳ ಖಾತೆಗೆ ಅನುದಾನ ಜಮೆಮಾಡಲಾಗಿದೆ ಎಂದರು. ಅದ್ಧೂರಿಯಾಗಿ ಹನುಮ ಜಯಂತಿ ಆಚರಿಸುತ್ತಿದ್ದು ಈ ಗ್ರಾಮ ಜಾತ್ಯಾತೀತ ಭಾವೈಕ್ಯತಾ ಕೇಂದ್ರವಾಗಿದೆ ಎಂದು ಕೋನರಡ್ಡಿ ಹೇಳಿದರು.  

ಈ ಸಂದರ್ಭದಲ್ಲಿ ಅಶೋಕ ಯಡವಣ್ಣವರ, ಅಣ್ಣಪ್ಪ ಕುಲಕರ್ಣಿ, ಬಸವರಾಜ ಪಡೆಸೂರ, ಸೈಯ್ಯದ ಬಾವಾಖಾನವರ, ಹನಮಂತ ಚುಂಗಿನ, ರಾಮಣ್ಣ ರಡ್ಡೇರ, ಸಿದ್ದರಾಮಜ್ಜ ಹಿರೇಮಠ, ರಮೇಶ ಅಳಗವಾಡಿ, ನಿಂಗಪ್ಪ ತಮ್ಮಣ್ಣವರ, ರಾಮಣ್ಣ ಗಾಣಿಗೇರ, ಡಾ: ತಾಜುದ್ದೀನ ಮುಲ್ಲಾನವರ, ಹನಮಂತಪ್ಪ ಗಾಣಿಗೇರ, ಮಲ್ಲಪ್ಪ ಗುರಿಕಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.