ಮಾಸ್ಕೋ, ಏ.18, ಕಳೆದ ಕೆಲವು ದಿನಗಳಿಂದ ವಿಶ್ವದಲ್ಲಿ ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್, ಜನರನ್ನು ತಬ್ಬಿಬ್ಬಾಗಿಸಿದ್ದು, ಹಲವು ಜನರ ಜೀವ ತೆಗೆದುಕೊಂಡಿದೆ. ರಷ್ಯಾದಲ್ಲಿ ಕಳೆದ 24 ಗಂಟೆಗಳಲ್ಲಿ 4,785 ಹೊಸ ಪ್ರಕರಣ ಗಳು ದಾಖಲಾಗಿವೆ. “ಒಂದೇ ದಿನದಲ್ಲಿ ರಷ್ಯಾದ 79 ವಿಭಾಗಗಳಲ್ಲಿ ಕಾಣಿಸಿಕೊಂಡಿದೆ. ಒಟ್ಟಾರೆಯಾಗಿ ರಷ್ಯಾದಲ್ಲಿ 36,793 ಪ್ರಕರಣಗಳು ದಾಖಲಾಗಿದ್ದು, 85 ವಿಭಾಗಗಳಲ್ಲಿ ಸೋಂಕು ಪೀಡಿತರಿದ್ದಾರೆ. ಇನ್ನು 2,649 ಪ್ರಕರಣಗಳಲ್ಲಿ 427 ಮಾಸ್ಕೊದಲ್ಲಿ, ಸೆಂಟ್ ಪೀಟರ್ಸ್ ಬರ್ಗ್ ನಲ್ಲಿ 139 ಪ್ರಕರಣ ವರದಿಯಾಗಿವೆ. ಒಟ್ಟು ಸಾವುನೋವುಗಳ ಸಂಖ್ಯೆ 313 ಕ್ಕೆ ತಲುಪಿದೆ. ಏತನ್ಮಧ್ಯೆ, ಕಳೆದ 24 ಗಂಟೆಗಳಲ್ಲಿ 467 ಜನರು ಚೇತರಿಸಿಕೊಂಡಿದ್ದಾರೆ, ಒಟ್ಟು 3,057 ಜನರನ್ನು ಬಿಡುಗಡೆ ಮಾಡಲಾಗಿದೆ.ವಿಶ್ವದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ಲಕ್ಷಾಂತರ ಜನ ಸಾವನ್ನಪ್ಪಿದ್ದಾರೆ.