ಡೆಹ್ರಾಡೂನ್, ಫೆ 8, ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ 4.7 ತೀವ್ರತೆಯ ಭೂಕಂಪನದಿಂದ ಇಬ್ಬರು ಗಾಯಗೊಂಡಿದ್ದಾರೆ.ಭೂಕಂಪ ಕೇಂದ್ರಬಿಂದುವನ್ನು ಗೋಗಿನಾದಲ್ಲಿ ಗುರುತಿಸಲಾಗಿದ್ದು, ಬೆಳಿಗ್ಗೆ 6.31ಕ್ಕೆ ಭೂಕಂಪನ ಸಂಭವಿಸಿದೆ ಎಂದು ಬಾಗೇಶ್ವರ ಜಿಲ್ಲಾಧಿಕಾರಿ ರಂಜನಾ ರಾಜ್‌ಗುರು ತಿಳಿಸಿದ್ದಾರೆ.ಭೂಕಂಪನದಿಂದ ಲಚಮ್ ರಾಮ್ ಎಂಬುವವರ ಮನೆ ಹಾನಿಗೊಂಡಿದೆ. ಗಾಯಾಳುಗಳನ್ನು ಬಸಂತಿ ದೇವಿ (42) ಮತ್ತು ಅವರ ಮಗಳು ರೀಟಾ (11) ಎಂದು ಗುರುತಿಸಲಾಗಿದೆ.