ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಮಂದಿರ ನಿರ್ಮಾಣಕ್ಕೆ 4.11 ಲಕ್ಷ ದೇಣಿಗೆ
4.11 lakh donation for the construction of Vedanta Kesari Mallikarjuna Shivayogi temple
ಲೋಕದರ್ಶನ ವರದಿ
ಜಮಖಂಡಿ 21 : ತಾಲ್ಲೂಕಿನ ಹುಲ್ಯಾಳ ಗುರುದೇವಾಶ್ರಮದ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಮಂದಿರಕ್ಕೆ ಮರೇಗುದ್ದಿ ಗ್ರಾಮದ ಸಮಸ್ತ ಗ್ರಾಮಸ್ಥರ ವತಿಯಿಂದ ರೂ.4,11,000/- ದೇಣಿಗೆಯನ್ನು ಹರ್ಷಾನಂದ ಮಹಾಸ್ವಾಮಿಗಳಿಗೆ ಸಮರ್ಿಸಲಾಯಿತು.
ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಮಹಾಸ್ವಾಮಿಗಳ ಸಂಕಲ್ಪದಂತೆ ಅವರ ಗುರುಗಳಾದ ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಮಂದಿರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಸಿದ್ಧೇಶ್ವರ ಶ್ರೀಗಳ ಸಂಕಲ್ಪ ಪೂರೈಕೆಗೆ ಅಳಿಲು ಸೇವೆ ಸಲ್ಲಿಸುವ ದೃಷ್ಟಿಯಿಂದ ಗ್ರಾಮಸ್ಥರಿಂದ ಕೈಲಾದ ವಂತಿಗೆ ಸಂಗ್ರಹಿಸಿ ಹರ್ಷಾನಂದ ಶ್ರೀಗಳಿಗೆ ಸಮರ್ಿಸಿದ್ದಾರೆ.
ಗ್ರಾಮದ ಹಿರಿಯರು ತಮ್ಮ ವಂತಿಗೆ ಹಣವನ್ನು ಮೊದಲು ನೀಡಿ ನಂತರ ಗ್ರಾಮಸ್ಥರಿಂದ ವಂತಿಗೆ ಹಣವನ್ನು ಸಂಗ್ರಹಿಸಲು ಮುಂದಾಗಿದ್ದು ವಿಶೇಷವಾಗಿತ್ತು. ವಯಸ್ಸಾದ ಹಿರಿಯರು ತೋಟದ ಮನೆಗಳಿಗೆ ತೆರಳಿ ವಂತಿಗೆ ಸಂಗ್ರಹಿಸಿದ್ದು ಮತ್ತೊಂದು ವಿಶೇಷತೆಯಾಗಿದೆ. ಇಳಿ ವಯಸ್ಸಿನಲ್ಲೂ ಆರೋಗ್ಯವಂತರಾಗಿರಲು ಸಿದ್ಧೇಶ್ವರ ಮಹಾಸ್ವಾಮಿಗಳ ಆಶೀರ್ವಾದವೆ ಕಾರಣ ಎಂದು ವಂತಿಗೆ ಸಂಗ್ರಹಿಸಿದ ಹಿರಿಯರು ಮಾತನಾಡಿಕೊಳ್ಳುತ್ತಿದ್ದರು. ವಂತಿಗೆ ಹಣವನ್ನು ಸಮರ್ಿಸಿದ ಧನ್ಯತಾಭಾವ ಹಿರಿಯರ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಮಲ್ಲಪ್ಪ ಅಥಣಿ, ಬಸಪ್ಪ ಬಾರಿಕಾಯಿ, ಸೋಮಪ್ಪ ಹವಾಲ್ದಾರ, ಹನಮಂತ ಗುಡಿ, ಹನಮಂತ ಕನಕನವರ, ರಾಚಪ್ಪ ಹುನ್ನೂರ, ಹನಮಂತ ದಾಶ್ಯಾಳ(ಘಟ್ನಟ್ಟಿ), ಸಂಗನಗೌಡ ಪಾಟೀಲ, ಅಡಿವೆಪ್ಪ ಗಸ್ತಿ, ರಾಚಯ್ಯ ಮಠಪತಿ ಇತರರು ಗ್ರಾಮಸ್ಥರಿಂದ ವಂತಿಗೆ ಸಂಗ್ರಹಿಸಿದ ಹಿರಿಯರಾಗಿದ್ದಾರೆ.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 