39 ವರ್ಷಗಳ ಸೇವೆ: ಸುಜಾತ ಚಲವಾದಿಗೆ ಸಮಾಜದಿಂದ ವಿಶೇಷ ಸನ್ಮಾನ

39 ವರ್ಷಗಳ ಸೇವೆ: ಸುಜಾತ ಚಲವಾದಿಗೆ ಸಮಾಜದಿಂದ ವಿಶೇಷ ಸನ್ಮಾನ  39 Years of Service: Special Felicitation for Sujatha Chalavadi by the Community

ಮಮದಾಪುರ, ಆ.11: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮಮದಾಪುರ ಗ್ರಾಮದ ಆರೋಗ್ಯ ಇಲಾಖೆಯಲ್ಲಿ ಬರೋಬ್ಬರಿ 39 ವರ್ಷಗಳ ಕಾಲ ಶುಶ್ರೂಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸುಜಾತ ಜಟ್ಟೆಪ್ಪ ಚಲವಾದಿ ಅವರನ್ನು ಮಮದಾಪುರದ ಚಲವಾದಿ ಸಮಾಜದ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮದ ಯುವ ನಾಯಕ ಸುಖದೇವ್ ಕಟ್ಟಿಮನಿ, “ಭೂಮಿಗೆ ಬರುವುದಕ್ಕೂ ಮೊದಲು ನಮ್ಮನ್ನು ಕಾಪಾಡುವ ಭಗವಂತ ಮೇಲಿದ್ದಾನೆ.

ಆದರೆ ಭೂಮಿಯ ಮೇಲೆ ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುವ ದೇವರೆಂದರೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ” ಎಂದು ಹೇಳಿದರು. ಸುಜಾತ ಚಲವಾದಿ ಅವರು ತಮ್ಮ 39 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಜನರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು, ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವದಿಂದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದರೂ ಜನರ ಸೇವೆಯಿಂದ ಅವರು ನಿವೃತ್ತರಾಗಿಲ್ಲ ಎಂದು ಸುಖದೇವ್ ಕಟ್ಟಿಮನಿ ಅಭಿಪ್ರಾಯಪಟ್ಟರು.  

ಕಾರ್ಯಕ್ರಮದಲ್ಲಿ ಮಮದಾಪುರದ ವಿರಕ್ತಮಠದ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಗಂಗೂರ್, ಸದಾಶಿವ ಕಾಖಂಡಿಮಠ, ಕೌಸರ್ ನಿಯಾಜ್ ಅತ್ತಾರ್, ಲಕ್ಷ್ಮಣ ತೇಲಿ, ಸುಖದೇವ್ ಕಟ್ಟಿಮನಿ, ಸಾಬುರಾವ್ ಚಲವಾದಿ, ತುಕಾರಾಮ ಮಮದಾಪುರ, ಬಾಬು ಶೇಗುಣಸಿ ಸೇರಿದಂತೆ ಹಲವರು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಸುದೀರ್ಘ 39 ವರ್ಷಗಳ ಕಾಲ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಸುಜಾತ ಚಲವಾದಿ ಅವರ ಸೇವೆಯನ್ನು ಗಣ್ಯರು ಹಾಗೂ ಸಮಾಜದ ಮುಖಂಡರು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು