35ನೇ ವೇದಾಂತ ಪರಿಷತ್ತು; ಲೋಕದರ್ಶನ ಪತ್ರಿಕೆಯ ವರದಿಗೆ ಸಹಜಾನಂದಶ್ರೀ ಮೆಚ್ಚುಗೆ
35th Vedanta Parishad; Sahajanandashree praises Lokdarshan newspaper's report
ಪಾಲಬಾವಿ 25: ಪತ್ರಿಕೆಗಳು ಸತ್ಯ, ವಸ್ತುನಿಷ್ಠ ವರದಿಗಳನ್ನು ಪ್ರಕಟಿಸಬೇಕು. ಪತ್ರಕರ್ತರು ನೈಜ ಹಾಗೂ ಪ್ರಾಮಾಣಿಕ ವರದಿಗೆ ಹೆಚ್ಚು ಒತ್ತು ಕೊಡಬೇಕು. ಪತ್ರಕರ್ತರು ಯಾವಾಗಲೂ ಕಾರ್ಯನಿರತರಾಗಿರಬೇಕು. ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜವನ್ನು ಸರಿಪಡಿಸುವ ಹೊಣೆಗಾರಿಕೆ ಪತ್ರಕರ್ತರ ಜವಾಬ್ದಾರಿಯಾಗಿದೆ ಎಂದು ಮುಂಬಯಿ-ಜಮಖಂಡಿ ಸಿದ್ಧಾರೂಢ ಮಠದ ಪೀಠಾಧಿಪತಿ ಸಹಜಾನಂದ ಮಹಾಸ್ವಾಮಿಗಳು ಹೇಳಿದರು.
ರಾಯಬಾಗ ತಾಲೂಕು ಹಿಡಕಲ್ಲ ಗ್ರಾಮದ ಸಿದ್ಧಾರೂಢ ಮಠದಲ್ಲಿ ಏ.25ರಂದು ಮುಂಜಾನೆ 10ಗಂಟೆಗೆ ಜರುಗುತ್ತಿರುವ 35ನೇ ವೇದಾಂತ ಪರಿಷತ್ತು ಹಾಗೂ ಸಿದ್ಧಾರೂಢ ಮಠದ ಜಾತ್ರಾ ಮಹೋತ್ಸವ ಮಹಾಮಂಗಳ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಹೆಸರಾಂತ ಲೋಕದರ್ಶನ ಪತ್ರಿಕೆಯು 35ನೇ ವೇದಾಂತ ಪರಿಷತ್, ಸಿದ್ದಾರೂಢ ಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮದ ವರದಿ ಸುವಿವರವಾಗಿ ಪ್ರಕಟಿಸಿದ್ದರ ಪ್ರಯುಕ್ತ ಪತ್ರಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶ್ರೀಗಳು ಪತ್ರಿಕೆಯ ಬಗ್ಗೆ ಗುಣಗಾನ ಮಾಡಿದರು. ವೇದಿಕೆ ಮೇಲೆ ಜಮಖಂಡಿ ರುದ್ರಾವಧೂತ ಮಠದ ಪೀಠಾಧಿಪತಿ ಕೃಷ್ಣಾನಂದ ಅವಧೂತರು, ಕೋಳಿಗುಡ್ಡ ಸುಜ್ಞಾನ ಕೂಟೀರುವ ಸ್ವರೂಪಾನಂದ ಮಹಾ ಸ್ವಾಮೀಜಿ, ಹಡಗಿನಾಳದ ಹುತ್ತೇಶ್ವರ ಶರಣರು ಇದ್ದರು.
ಹಿರಿಯರ ಹಿರಿಯರಾದ ದತ್ತು ಪಾರ್ಥನಹಳ್ಳಿ, ಸಂಜು ಮಿಶಿ, ಶಿವಪುತ್ರ ಪಾರ್ಥನಹಳ್ಳಿ, ಪ್ರಕಾಶ ಹಳ್ಳೆಪ್ಪಗೋಳ, ಕಲ್ಲಪ್ಪ ಮಾಳಿ, ದೇವರಾಜ ಪಾರ್ಥನಳ್ಳಿ, ಭಗವಂತ ಸುರಣ್ಣವರ, ದೇವರಾಜ ಪಾರ್ಥನಳ್ಳಿ, ಪ್ರತಾಪ ಹುಲ್ಲೋಳಿ, ಸಚಿನ ಪಾರ್ಥನಲ್ಲಿ, ರಾಮಪ್ಪ ಹೊಸಟ್ಟಿ, ಅಕ್ಷಯ ಪಾರ್ಥನಳ್ಳಿ, ಸಾಗರ ಸಿಂಗೆ, ರಮೇಶ ಹಳ್ಳೆಪ್ಪಗೋಳ, ವಿಠಲ ಪ್ರಾರ್ಥನಳ್ಳಿ, ರಾಹುಲ್ ಶಿಂಗೆ, ಸುನಿಲ ಕಾಂಬಳೆ, ಯಲ್ಲವ್ವ ಫೋಟೆ, ಸುಂದರವಾ ಗಲಗಲಿ, ಮಹಾದೇವಿ ಪುಟಾಣಿ ಇತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 