23ರಿಂದ ಹಿಡಕಲ್ಲ ಗ್ರಾಮದಲ್ಲಿ 35ನೇ ಸಿದ್ಧಾರೂಢ ಮಠ ಜಾತ್ರಾ ಮಹೋತ್ಸವ

23ರಿಂದ ಹಿಡಕಲ್ಲ ಗ್ರಾಮದಲ್ಲಿ 35ನೇ ಸಿದ್ಧಾರೂಢ ಮಠ ಜಾತ್ರಾ ಮಹೋತ್ಸವ 35th Siddharudha Matha Jatra Mahotsav to be held in Hidakalla village from 23rd

ಪಾಲಬಾವಿ 22 :  ರಾಯಬಾಗ ತಾಲೂಕು ಹಿಡಕಲ್ಲ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸದ್ಗುರು ಸಿದ್ಧಾರೂಢ ಮಠದಲ್ಲಿ 35ನೇ ವೇದಾಂತ ಪರಿಷತ್ ಹಾಗೂ ಜಾತ್ರಾ ಮಹೋತ್ಸವವು ಗುರುವಾರ ದಿ.23ರಿಂದ 25ರ ವರೆಗೆ ಮೂರು ದಿನಗಳ ವರೆಗೆ ಸತ್ಸಂಗ ಮಹಾತ್ಮರಿಂದ ಪ್ರವಚನ, ಸಾಧಕರಿಗೆ ಸನ್ಮಾನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು. ಮುಂಬಯಿ- ಜಮಖಂಡಿ ಸಿದ್ಧಾರೂಢ ಮಠದ ಪೀಠಾಧಿಪತಿ ವೇದಾಂತಾಚಾರ್ಯ ಸಹಜಾನಂದ ಅವಧೂತರು ದಿವ್ಯ ಸಾನಿಧ್ಯವಹಿಸುವರು.  ವಿಜಯಪುರ ಷಣ್ಮುಖಾರೂಢ ಮಠ, ಹುಬ್ಬಳ್ಳಿ ಶಾಂತಾಶ್ರಮದ ಪೀಠಾಧಿಪತಿ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಸಾನಿಧ್ಯವಹಿಸುವರು. ಜಮಖಂಡಿ ರುದ್ರಾವಧೂತ ಮಠದ ಪೀಠಾಧಿಪತಿ ಕೃಷ್ಣಾನಂದ ಅವಧೂತರು, ಹುಬ್ಬಳ್ಳಿ ಸಿದ್ಧಾರೂಢ ಮಠದ ಟ್ರಸ್ಟ್‌ ಕಮಿಟಿ ಧರ್ಮದರ್ಶಿಗಳು ಶಾಮನಂದ ಪೂಜಾರಿ, ಕೋಳಿಗುಡ್ಡ ಸುಜ್ಞಾನ ಕೋಟಿರದ ಸ್ವರೂಪಾನಂದ ಸ್ವಾಮಿಗಳು, ಹಡಗಿನಾಳದ ಮುತ್ತೇಶ್ವರ ಸ್ವಾಮೀಜಿ ಉಪಸ್ಥಿತರಿದ್ದು ಪ್ರವಚನ ನೀಡುವರು.  ಗುರುವಾರ ದಿ:23ರಂದು ಸಾಯಂಕಾಲ ಪ್ರವಚನದ ವಿಷಯ:- "ಬೇಡ ಬೇಡಲೇ ಮನವೇ ವಿಷಯದಾಸೆ ಮಾಡಿ ಕೆಡದಿರು ಸಾರಿದೆ" ಶುಕ್ರವಾರ ದಿ.24ರಂದು ಮುಂಜಾನೆ  "ಅಜ್ಞಾನಿಯಲ್ಲವೇ ನೀನು ಜೀವನೇ ಸಜ್ಞಾನಿಯೆಂದು ನುಡಿವರೆ " ಶುಕ್ರವಾರ ದಿ.24ರಂದು ಸಾಯಂಕಾಲ ವಿಷಯ:- "ಚಿಂತಿಸದಿರು ಸುಖದುಃಖ ದೆಡೆಯೊಳು" ಕೊನೆಯ ದಿನ ಶನಿವಾರ ದಿ.25ರಂದು ಮುಂಜಾನೆ 9ಕ್ಕೆ "ತಳುವುದೇ ಮಾಳ್ಪದಾವುದು ಭವಹರಣ" ಎಂಬ ವಿಷಯದ ಮೇಲೆ ಎಲ್ಲ ಪೂಜ್ಯರು ಪ್ರವಚನ ನೀಡುವರು.

ಗುರುವಾರ ದಿ.23ರಂದು ಸಾಯಂಕಾಲ 5ಗಂಟೆಗೆ ಹಿಡಕಲ್ಲ ಗ್ರಾಮದ ಮಹಾದ್ವಾರದಿಂದ ಸದ್ಗುರು ಸಿದ್ಧಾರೂಢರ ಭಾವಚಿತ್ರ, ಪಲ್ಲಕ್ಕಿ, ಹಾಗೂ ರಥದಲ್ಲಿ ಮಹಾತ್ಮರನ್ನು ಕುಳ್ಳಿರಿಸಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರಿಂದ ಕುಂಭ, ಆರತಿ, ವಿವಿಧ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆಯು ಜರುಗುವುದು. ಸಾಯಂಕಾಲ 9ಗಂಟೆಗೆ ಮಹಾತ್ಮರಿಂದ ಪ್ರವಚನ ಜರುಗುವುದು. ಶುಕ್ರವಾರ 25ರಂದು ಮುಂಜಾನೆ 6ಗಂಟೆಗೆ ಸಿದ್ಧಾರೂಡ ಸ್ವಾಮಿಗಳ ಕರ್ತೃ ಗದ್ದಿಗೆ ವಿಶೇಷ ಪೂಜೆ, ಪಂಚಾಕ್ಷರಿ ಮಹಾಮಂತ್ರದೊಂದಿಗೆ ಮಂತ್ರ ಪಠಣ, ವಸ್ತ್ರಧಾರಣೆ, ನೈವೇದ್ಯ, ಸಮರೆ​‍್ಣ ಜರುಗುವುದು. ಸಾಯಂಕಾಲ 7ಗಂಟೆಗೆ ಹಿಡಕಲ್ಲ ಗ್ರಾಮದ ಸಿದ್ಧಾರೂಢ ಭಜನಾ ಮಂಡಳ  ಹಾಗೂ ಮಲ್ಲಿಕಾರ್ಜುನ ಭಜನಾ ಮಂಡಳ ಹಾಗೂ ಸುತ್ತಮುತ್ತಲಿ ಗ್ರಾಮಗಳ ಭಜನಾ ಮೇಳದವರಿಂದ ಭಜನಾ ಕಾರ್ಯಕ್ರಮವು ಜರುಗುವವು.  ಶನಿವಾರ ದಿ.25ಮುಂಜಾನೆ 9ಗಂಟೆಗೆ  ವೇದಾಂತ ಪರಿಷತ್ತು ಮಹಾಮಂಗಳೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು, ಧಾನಿಗಳನ್ನ ಪೂಜ್ಯರು ಗೌರವಿಸಿ ಸತ್ಕರಿಸುವರು. ನಂತರ ದಾಸೋಹದ ಮಹಾಮನೆಯಲ್ಲಿ ಅನ್ನ ಸಂತರೆ​‍್ಣ ನೆರವೇರುವುದು. ಈ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹಕ್ಕೆ ಅವಕಾಶವಿರುತ್ತದೆ ಹೆಚ್ಚಿನ ಮಾಹಿತಿಗಾಗಿ 7349182748 ಇವರನ್ನು ಸಂಪರ್ಕಿಸಬೇಕೆಂದು ಸಿದ್ಧಾರೂಢ ಮಠದ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.