ನವದೆಹಲಿ, ಜ 25, ವಿಶ್ವ ಚಾಂಪಿಯನ್ ಬೆಲ್ಜಿಯಂ ವಿರುದ್ಧ ಮುಂಬರುವ ಎಫ್‌ಐಎಚ್ ಹಾಕಿ ಪ್ರೊ ಲೀಗ್ ಸವಾಲಿನ ನಿಮಿತ್ತ ಪುರುಷರ ರಾಷ್ಟ್ರೀಯ ಹಾಕಿ ಶಿಬಿರಕ್ಕೆ 32 ಆಟಗಾರರನ್ನು ಪ್ರಕಟಿಸಲಾಗಿದೆ.ಭಾರತ ಹಾಕಿ ತಂಡ ತನ್ನ ಮೊದಲನೇ ಹಣಾಹಣಿಯಲ್ಲಿ ನೇದರ್‌ಲೆಂಡ್ ವಿರುದ್ಧ 5-2 ಅಂತರದಲ್ಲಿ ಭರ್ಜರಿ ಜಯ ಸಾಧಿಸಿತ್ತು. ಬಳಿಕ, ಎರಡನೇ ಹಣಾಹಣಿಯಲ್ಲಿಯೂ 3-3 (3-1) ಅಂತರದಲ್ಲಿ ಗೆದ್ದು ಪ್ರೊ ಲೀಗ್ ನಲ್ಲಿ ಶುಭಾರಂಭ ಕಂಡಿದೆ.
ಈಗ ಅದೇ ಲಯ ಮುಂದುವರಿಸುವ ತುಡಿತದಲ್ಲಿದೆ. ಭಾರತಕ್ಕೆ ಮುಂದಿನ ಸವಾಲು ವಿಶ್ವ ಚಾಂಪಿಯನ್ ಬೆಲ್ಜಿಯಂ ತಂಡವನ್ನು ಎದುರಿಸುವುದಾಗಿದೆ. ಹಾಗಾಗಿ, ಇನ್ನಷ್ಟು ತರಬೇತಿ ಹಾಗೂ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿಯಲ್ಲಿ ಮುಖ್ಯ ಕೋಚ್ ಗ್ರಹಾಮ್ ರೀಡ್ 32 ಆಟಗಾರರನ್ನು ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ ಮಾಡಿದ್ದಾರೆ.ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದ ವರುಣ್ ಕುಮಾರ್ ಅವರು ಇದೀಗ ತಂಡಕ್ಕೆ ಮರಳಿದ್ದಾರೆ. ಈ ಶಿಬಿರದಲ್ಲಿ ಓನ್-ಆನ್-ಆನ್ ಟ್ಯಾಕ್ಲಿಂಗ್ ಕೌಶಲದಲ್ಲಿ ಇನ್ನಷ್ಟು ಸುಧಾರಣೆ ಕಂಡುಕೊಳ್ಳುವುದು ನಮ್ಮ ಶಿಬಿರದ ಮುಖ್ಯ ಉದ್ದೇಶವಾಗಿದೆ, ಎಂದು ಅವರು ತಿಳಿಸಿದ್ದಾರೆ.
ಆಟಗಾರರು: ಪಿ.ಆರ್ ಶ್ರೀಜೇಶ್, ಕೃಷ್ಣನ್ ಬಹದ್ದೂರ್ ಪಠಾಕ್, ಸೂರಜ್ ಕರ್ಕೆರ, ಹರ್ಮನ್ ಪ್ರೀತ್ ಸಿಂಗ್, ದಿಲ್ಪ್ರಿತ್ ಸಿಂಗ್, ಸುರೇಂದರ್ ಕುಮಾರ್, ಬಿರೇಂದ್ರ ಲಕ್ರಾ, ರೂಪಿಂದರ್ ಪಾಲ್ ಸಿಂಗ್, ಗುರೀಂದರ್ ಸಿಂಗ್, ಅಮಿತ್ ರೋಹಿದಾಸ್, ಕೋತಾಜಿತ್ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ನೀಲಕಾಂತ್ ಶರ್ಮಾ, ವಿವೇಕ್ ಸಾಗರ್, ಸಿಮ್ರಾನ್ ಜೀತ್ ಸಿಂಗ್, ಆಕಾಶ್ ದೀಪ್ ಸಿಂಗ್, ರಮಣ್ ದೀಪ್ ಸಿಂಗ್, ಎಸ್.ವಿ ಸುನೀಲ್, ಮಂದೀಪ್ ಸಿಂಗ್, ಲಲಿತ್ ಕುಮಾರ್, ಗುರುಸಬ್ಜಿತ್ ಸಿಂಗ್, ಶಾಂಶಿರ್ ಸಿಂಗ್, ವರುಣ್ ಕುಮಾರ್, ಜರ್ಮನ್ ಪ್ರೀತ್ ಸಿಂಗ್, ದಿಪ್ಸನ್ ಟರ್ಕಿ, ನೀಲಮ್ ಸಂಜೀಪ್, ಜಸ್ಕರನ್ ಸಿಂಗ್, ರಾಜಕುಮಾರ್ ಪಾಲ್, ಗುಜ್ರಾಂತ್ ಸಿಂಗ್, ಸುಮೀತ್, ಚಿಂಗ್ಲೇಸನ ಸಿಂಗ್.