ಕೊರೊನವೈರಸ್ ಪೀಡಿತ ಕ್ರೂಸ್ ಹಡಗಿನಿಂದ ಪ್ರಯಾಣಿಕರು ಇಂದು ಹೊರಕ್ಕೆ

ಟೋಕಿಯೊ, ಫೆ 19,ಕರೋನವೈರಸ್ ಸೋಂಕು ತಗುಲಿ ಜಪಾನ್ ನ ಯೊಕೊಹಾಮಾ ಸಮೀಪದ ಸಮುದ್ರದಲ್ಲೇ ಪ್ರತ್ಯೇಕವಾಗಿನಿಂತಿರುವ ಪ್ರವಾಸಿ ಹಡಗಿನಿಂದ(ಕ್ರೂಸ್) ಸುಮಾರು 3,000 ಜನರು ಬುಧವಾರ ಹೊರಬರಲಿದ್ದಾರೆ ಎಂದು ಜಪಾನ್ ಆರೋಗ್ಯ ಸಚಿವರು ತಿಳಿಸಿದ್ದಾರೆ.     ವೈರಸ್ ಪೀಡಿತ ಡೈಮಂಡ್ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿ ಉಳಿದಿರುವ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯ ರಕ್ತ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಜಪಾನ್ ಆರೋಗ್ಯ, ಕಾಮರ್ಿಕ ಮತ್ತು ಕಲ್ಯಾಣ ಸಚಿವ ಕಟ್ಸುನೊಬು ಕ್ಯಾಟೊ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಹಡಗಿನಿಂದ ಪ್ರಯಾಣಿಕರು ಹೊರಹೋಗಲು ಅನುಮತಿಸುವ ಪ್ರಕ್ರಿಯೆ  ಶುಕ್ರವಾರದೊಳಗೆ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.  ಸೋಂಕು ತಗುಲಿರದ ಎಲ್ಲರನ್ನೂ ಯಾವುದೇ ಷರತ್ತುಗಳಿಲ್ಲದೆ ಹಡಗು ತೊರೆಯಲು ಅನುಮತಿಸಲಾಗುವುದು. ಆದರೆ ವೈರಸ್ ಸೋಂಕಿತರು ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಕ್ರೂಸ್ ಹಡಗಿನಲ್ಲಿ ಸುಮಾರು 56 ದೇಶಗಳ ಸುಮಾರು 3,700 ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ವಿಮಾನದಲ್ಲಿದ್ದವ ಪೈಕಿ ಸೋಂಕು ತಗುಲಿರುವವರ ಸಂಖ್ಯೆ 542 ಕ್ಕೆ ತಲುಪಿದೆ. ಪ್ರಯಾಣಿಕರೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟ ನಂತರ ಹಾಂಗ್ ಕಾಂಗ್ನಿಂದ ಆಗಮಿಸಿದ ಹಡಗನ್ನು ಯೊಕೊಹಾಮಾ ಬಂದರು ಸಮೀಪ ಯಾವುದೇ ಸಂಪರ್ಕವಿಲ್ಲದಂತೆ ಪ್ರತ್ಯೇಕವಾಗಿ ನಿಲ್ಲಿಸಲಾಗಿದೆ. 80 ವರ್ಷದ ಪ್ರಯಾಣಿಕರೊಬ್ಬರು ಜನವರಿ ಮಧ್ಯಭಾಗದಲ್ಲಿ ಟೋಕಿಯೊ ಆಗಮಿಸಿ ಜನವರಿ 20 ರಂದು ಹಡಗು ಹತ್ತಿದ್ದರು. ಫೆಬ್ರವರಿ 25 ರಂದು ಹಡಗು ತೊರೆದು ಆಸ್ಪತ್ರೆಗೆ ದಾಖಲಾಗಿದ್ದರು