ನವದೆಹಲಿ ಎ, 27 , ದೇಶದ 300ರಕ್ಕೂ ಹೆಚ್ಚು ಜಿಲ್ಲೆಗಳ್ಲಲಿ ಈವರೆಗೆ ಯಾವುದೆ ಕರೋನ ಸೋಂಕಿನ ಪ್ರಕರಣ ವರದಿಯಾಗಿಲ್ಲ ಇವುಗಳನ್ನು ಪವಿತ್ರ ಜಿಲ್ಲೆಗಳೆಂದು ಪರಿಗಣಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಸಂವಾದದಲ್ಲಿ ಮತನಾಡಿದ ಅವರು ಜಿಲ್ಲೆಗಳಲ್ಲಿ ಮುಂದೆಯೂ ಸಾಮಾಜಿಕ ಅಂತರ ಕಾಪಾಡಿಕೊಂಡು ಕರೋನ ಸೋಂಕು ಕಾಣಿಸಿಕೊಳ್ಳದಂತೆ ನೋಡಿಕೊಳ್ಳುವ ಹೊಣೆ ಎಲ್ಲರ ಮೇಲೂ ಇದೆ ಎಂದು ಅವರು ಒತ್ತಿ ಹೇಳಿದರು. ಈ ಜಿಲ್ಲೆಗಳಂತೆ ಹಸಿರು ವಲಯಗಳನ್ನು ವಿಸ್ತರಿಸುವ ಅವಶ್ಯಕತೆಯಿದೆ ಏಕೆಂದರೆ ಮುಂದಿನ ದಿನಗಳಲ್ಲಿ ಈ ಪ್ರದೇಶಗಳಲ್ಲಿ ಏನಾಗುತ್ತದೆ ಎಂಬುದು 'ಭವಿಷ್ಯದಲ್ಲಿ ನಮ್ಮ ಜೀವನಕ್ಕೆ ದಾರಿ ಮಾಡಿಕೊಡಲಿದೆ ಎಂದರು .
ಮಾತನಾಡಲಾಗದ ಕೆಲವು ಮುಖ್ಯಮಂತ್ರಿಗಳು ಲಿಖಿತ ಸಲಹೆಗಳನ್ನು ಕಳುಹಿಸಿದ್ದಾರೆ ಮತ್ತು ತಜ್ಞರಿಂದಲೂ ಅನೇಕ ಸಲಹೆಗಳು ಬಂದಿವೆ ಎಂದರು. 'ನಮ್ಮ ಈಗಿನ ಆದ್ಯತೆಯ ಮಂತ್ರ ಎಂದರೆ ಕೆಂಪು ಬಣ್ಣವನ್ನು ಕಿತ್ತಳೆ ಬಣ್ಣಕ್ಕೆ, ಕಿತ್ತಳೆ ಬಣ್ಣವನ್ನು ಹಸಿರು ಬಣ್ಣಕ್ಕೆ ಪರಿವರ್ತಿಸುವುದು' ಎಂದು ಪಿಎಂ ಮೋದಿ ಸಭೆಯಲ್ಲಿ ಹೇಳಿದರು. ಬಿಕ್ಕಟ್ಟಿನ ಈ ಕ್ಷಣವು 'ಸುಧಾರಣೆಗೆ ಒಂದು ಅವಕಾಶ ನೀಡಿದೆ' ಎಂದು ಅವರು ಹೇಳಿದರು."ಪರಸ್ಪರ ಹೋರಾಡಲು ಸ್ಥಳವಿಲ್ಲ, ಪ್ರಮುಖ ಸುಧಾರಣೆಗೆ ರಾಜ್ಯಗಳು ಮುಂದಾಗಬೇಕು" ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳೆದಂರೆ ಬಿ.ಎಸ್. ಯಡಿಯೂರಪ್ಪ (ಕರ್ನಾಟಕ) ಅರವಿಂದ್ ಕೇಜ್ರಿವಾಲ್ (ದೆಹಲಿ), ಪಿಣರಾಯಿ ವಿಜಯನ್ (ಕೇರಳ), ಉದ್ಧವ್ ಠಾಕ್ರೆ (ಮಹಾರಾಷ್ಟ್ರ), ಇ.ಕೆ.ಪಳನಿಸ್ವಾಮಿ (ತಮಿಳುನಾಡು), ಕಾನ್ರಾಡ್ ಸಂಗ್ಮಾ (ಮೇಘಾಲಯ) ತ್ರಿವೇಂದ್ರ ಸಿಂಗ್ ರಾವತ್ (ಉತ್ತರಾಖಂಡ್) ).ಪ್ರಧಾನಿ ಜೊತೆ ಇದ್ದವರ ಪ್ರಮುಖರ ಪೈಕಿ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷ್ ವರ್ಧನ್ ಮತ್ತು ಪಿಎಂಒ ಕಚೇರಿಯ ಅಧಿಕಾರಿಗಳು ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಗಳು ಹಾಜರಿದ್ದರು.