ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣ ಮೃಗಗಳ ಸಾವು
28 black rhinos die at Kittur Rani Channamma Zoo
ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣ ಮೃಗಗಳ ಸಾವು
ಲೋಕ ದರ್ಶನ ವರದಿ
ಬೆಳಗಾವಿ 16 : ನಗರದ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಕಳೆದ ಎರಡು ಮೂರು ದಿನಗಳಲ್ಲಿ ಒಟ್ಟು 28ಕೃಷ್ಣ ಮೃಗಗಳು ಮೃತಪಟ್ಟಿವೆ.
ಬ್ಯಾಕ್ಟಿರಿಯಾ ಇನ್ಫೆಕ್ಷನ್‌ನಿಂದ ಸಾವುನ್ನಪ್ಪಿವೆ. ಒಟ್ಟು 38 ಕೃಷ್ಣ ಮೃಗಗಳಿದ್ದು ನ.13ಕ್ಕೆ 8 ಸಾವನ್ನಪ್ಪಿವೆ. ಅವುಗಳ ಪೋಸ್ಟ ಮಾರ್ಟಂ ಸ್ಯಾಂಪಲ್ಸನ್ನು ಬನ್ನೇರು ಘಟ್ಟ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಲ್ಯಾಬ್ ರಿಪೋರ್ಟ ಬರುವ ಮುಂಚೆ ಮತ್ತೆ 20 ಮೃಗಗಳು ಸಾವನ್ನಪ್ಪಿದ್ದು ಅಂತ್ಯಕ್ರಿಯೆ ಮಾಡಲಾಗಿದೆ. ಸದ್ಯಕೆ 10ಪ್ರಾಣಿಗಳು ಉಳಿದಿದ್ದು ಅವುಗಳು ಆರೋಗ್ಯವಾಗಿವೆ ಎಂದು ಮೃಗಾಲಯದ ನಿರ್ದೇಶಕ ನಾಗರಾಜ ಅವರು ಹೇಳಿದ್ದಾರೆ.
ರಾಜ್ಯದ ವಿವಿಧ ಮೃಗಾಲಯದಲ್ಲಿ ಈ ಪ್ರಾಣಿಗಳಿದ್ದು ಅವುಗಳಿಗೆ ಯಾವದೆ ಹಾನಿ ಉಂಟಾಗಿಲ್ಲ. ರಿಪೋರ್ಟ ಲ್ಯಾಬಗೆ ಕಳಿಸಲಾಗಿದ್ದು ಸ್ಥಳವನ್ನು ಪರೀಶೀಲಿಸಲು ಬೆಂಗಳೂರಿನ ವೈದ್ಯತಂಡ ಆಗಮಿಸಲಿದೆ. ಸದ್ಯಕ್ಕೆ ಪ್ರವಾಸಿಗರಿಗೆ ಉಳಿದೆಲ್ಲ ಪ್ರಾಣಿಗಳನ್ನು ನೋಡಲು ಯಾವದೆ ನಿರ್ಬಂಭವಿಲ್ಲ. ಆದರೆ ಕೃಷ್ಣಮೃಗಗಳು ಇರುವ ಪ್ರದೇಶಕ್ಕೆ ಮಾತ್ರ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ.
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ 