26ನೇ ಶೈಕ್ಷಣಿಕ ವರ್ಷ: ವಿದ್ಯಾರ್ಥಿಗಳಿಗೆ ಹೂವಿನ ಸ್ವಾಗತ ಹಾಗೂ ಕರಗಡಬು ಭೋಜನ
26th academic year: Floral welcome and Karagadubu dinner for students
ಲಕ್ಷ್ಮೇಶ್ವರ 02: ಪ್ರಸ್ತುತ ವರ್ಷದ 26-27 ನೇ ಶಾಲಾ ಶೈಕ್ಷಣಿಕ ಪ್ರಾರಂಭೋತ್ಸವವು ರಾಜ್ಯಾದ್ಯಂತ 1-6-26- ರಂದು ಪ್ರಾರಂಭಗೊಂಡವು ಅದರಂತೆ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ2ರಲ್ಲಿ ಶಾಲಾ ಪ್ರಾರಂಭೋತ್ಸವ ಶಾಲೆಯನ್ನು ತೊಳಲಿ ತೋರಣದಿಂದ ಶೃಂಗಾರ ಗೊಳಿಸಲಾಗಿತ್ತು ಪ್ರಾರಂಭೋತ್ಸವದ ದಿನದಂದು ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲೆಯ ಪ್ರಧಾನ ಗುರುಮಾತೆ ಸೇರಿದಂತೆ ಎಲ್ಲಾ ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಹೂವು ಹಾಕಿ ಸ್ವಾಗತ ಕೋರುವ ಮೂಲಕ ಸಂಭ್ರಮದೊಂದಿಗೆ ಬರಮಾಡಿಕೊಂಡರು. ವಿದ್ಯಾರ್ಥಿಗಳೆಂದರೆ ಶಿಕ್ಷಕಿಯರಿಗೆ ಅದು ಎಷ್ಟು ಪ್ರೀತಿ ನೋಡಿ ಪ್ರಥಮ ದಿನದ ಊಟಕ್ಕೆ ಎಲ್ಲ ವಿದ್ಯಾರ್ಥಿಗಳಿಗೆ ಕರಗಡಬು ಊಟದ ವ್ಯವಸ್ಥೆ ಮಾಡುವುದರೊಂದಿಗೆ ತಾವೇ ವಿದ್ಯಾರ್ಥಿಗಳಿಗೆ ಕರಗಡಬು ನೀಡಿದರು. ವಿದ್ಯಾರ್ಥಿಗಳು ಸರದಿ ಸಾಲ ಮೂಲಕ ಬಂದು ಕರಗಡಬು ಊಟವನ್ನು ಸಂಭ್ರಮಿಸಿದರು. ಈ ಸಮಯದಲ್ಲಿ ಶಾಲೆಯ ಪ್ರಧಾನ ಗುರುಮಾತೆ ಎಸ್ ಎಚ್ ಉಮಚಗಿ ಎಲ್ ಎಂ ಗುಂಡಪ್ಪನವರ ಎಂ ಡಿ ಸೊರಟೂರು ಗೀತಾ ಹಳ್ಯಾಳ ಎಸ್ ಎಸ್ ಜಿರಕಳ್ಳಿ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕಿಯರು ಶಾಲಾ ಪ್ರಾರಂಭೋತ್ಸವದಲ್ಲಿ ಸಂಭ್ರಮದೊಂದಿಗೆ ಪಾಲ್ಗೊಂಡಿದ್ದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 