ಅಮೆರಿಕದಲ್ಲಿ ಒಂದು ದಿನದಲ್ಲಿ ಕೊರೊನಾ ಸೋಂಕಿಗೆ 2500 ಜನರ ಸಾವು

ವಾಷಿಂಗ್ಟನ್, ಏ 16,ಅಮೆರಿಕದಲ್ಲಿ ಕೊರೊನಾ ಸೋಂಕಿಗೆ ಕಳೆದ 24 ಗಂಟೆಗಳಲ್ಲಿ 2494 ಜನರು ಮೃತಪಟ್ಟಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ 28364 ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6,37,359 ಕ್ಕೆ ಏರಿಕೆಯಾಗಿದೆ.ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯು ಎಚ್ ಒ ಕೋವಿಡ್ 19 ಅನ್ನು ಸಾಂಕ್ರಾಮಿಕ ಎಂದು ಘೋಷಿತ್ತು. ಈವರೆಗೆ ಜಗತ್ತಿನಾದ್ಯಂತ 20 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು 133000 ಜನರು ಮೃತಪಟ್ಟಿದ್ದಾರೆ.