ರಾಷ್ಟ್ರದ ವಿವಿಧ ಭಾಗಗಳಿಂದ ಆಯ್ಕೆಯಾದ 25 ತಂಡಗಳು ಭಾಗಿ
ಬೆಳಗಾವಿ 11: ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ಹಮ್ಮಿಕೊಂಡ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಎಸ್ ಐ ಎಚ್) 2024 7ನೇ ಆವೃತ್ತಿಯ ಫೈನಲ್ ಹಂತದ 36 ತಾಸುಗಳ ಹ್ಯಾಕಥಾನ್ ಸ್ಪರ್ಧೆ ನೋಡಲ್ ಕೇಂದ್ರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ ಟಿ ಯು) ಬೆಳಗಾವಿಯಲ್ಲಿ ದಿನಾಂಕ 11 ರಂದು ಉದ್ಘಾಟನೆಯಾಯಿತು.
7ನೇ ಆವೃತ್ತಿಯ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಖಋ) 2024 ಡಿಸೆಂಬರ್ 11ರಂದು ದೇಶದಾದ್ಯಂತ 51 ನೋಡಲ್ ಕೇಂದ್ರಗಳಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ಕಾರ್ಯಕ್ರಮವನ್ನು ಆನ್ಲೈನ್ ಮೂಲಕ ಏಕಕಾಲದಲ್ಲಿ ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು ಈ ಸಂದರ್ಭದಲ್ಲಿ ಮಾತನಾಡಿದ ಧರ್ಮೇಂದರ್ ಪ್ರಧಾನ್ ಅವರು ಹ್ಯಾಕಥಾನ್ ಕಾರ್ಯಕ್ರಮಗಳ ಪ್ರಾಮುಖ್ಯತೆಯ ಕುರಿತು ಮಾತನಾಡಿದರು ಮತ್ತು ಈ ಚಟುವಟಿಕೆಗಳಿಂದ ನಮ್ಮ ಯುವಜನರು ಸಾಮಾಜಿಕ ಸಮಸ್ಯೆಗಳ ಬಗ್ಗೆ ಯೋಚಿಸುವಂತೆ ಮಾಡುತ್ತವೆ, ಆ ಮೂಲಕ ಅವರು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ರಾಷ್ಟ್ರದ ಹಿತ ಮತ್ತು ಏಳಿಗೆಗಾಗಿ ಬಳಸುತ್ತಾರೆ. ಈ ಹ್ಯಾಕಥಾನ್ ಕೇವಲ ಎರಡು ಅಥವಾ ಐದು ದಿನಗಳಿಗೆ ಸೀಮಿತವಾಗಿಲ್ಲ ಬದಲಾಗಿ ಇದು ಪ್ರತಿದಿನದ ಪ್ರಕ್ರಿಯೆಯಾಗಿದ್ದು ನಮ್ಮ ದೈನಂದಿನ ಬದುಕಿನ ಭಾಗವಾಗಿದೆ ಎಂದು ಹೇಳಿದರು. ಇವತ್ತಿನ ಈ ಹ್ಯಾಕಥಾನ್ ಕೇವಲ ತಂತ್ರಜ್ಞಾನಕ್ಕೆ ಸೀಮಿತವಾಗಿಲ್ಲ ಬದಲು ನಮ್ಮ ರಾಷ್ಟ್ರದ ಇತಿಹಾಸ, ಪರಂಪರೆ ಸಂಸ್ಕೃತಿಯನ್ನು ಸಹ ಒಳಗೊಂಡಿದೆ. ಇಂದಿನ ಯುವ ಶಕ್ತಿಯಿಂದಲೇ 2047ರ ವೇಳೆಗೆ ಭಾರತವು ಜ್ಞಾನ ಆಧಾರಿತ ಸೂಪರ್ ಪವರ್ ಆಗಲಿದೆ ಮತ್ತು ಇಂದಿನ ಯುವಕರು ವಿಕಸಿತ ಭಾರತ್ ದ ಶಿಲ್ಪಿಗಳಾಗಿದ್ದಾರೆ ಎಂದು ಅವರು ಹೇಳಿದರು.
ವಿ ಟಿ ಯು ನಲ್ಲಿ ಉದ್ಘಾಟನೆ -ವಿ ಟಿ ಯು ಬೆಳಗಾವಿಯಲ್ಲಿ ಇದೆ ಹ್ಯಾಕಥಾನ್ ಸ್ಪರ್ಧೆಗೆ ಜಿಲ್ಲೆಯ ಮುಖ್ಯ ಮತ್ತು ಸೆಶನ್ ನ್ಯಾಯಾಧೀಶರಾದ. ಟಿ. ಏನ್. ಇನವಳ್ಳಿ ಚಾಲನೆ ನೀಡಿದರು. ವಿ ಟಿ ಯು ಕುಲಪತಿ ಪ್ರೊ ವಿದ್ಯಾಶಂಕರ್ ಎಸ್. ಅಧ್ಯಕ್ಷತೆ ವಹಿಸಿದ್ದರು. ಹ್ಯಾಕಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಟಿ ಎನ್ ಇನವಳ್ಳಿ ಅವರು ಕಾನೂನಿನಲ್ಲಿ ತಂತ್ರಜ್ಞಾನದ ಮಹತ್ವದ ಕುರಿತು ಮಾತನಾಡಿದರು. ತಂತ್ರಜ್ಞಾನವು ಕಾನೂನಿನ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಮತ್ತು ತಂತ್ರಜ್ಞಾನ ಬೆಳೆಯುತ್ತಿರುವುದರಿಂದ ಕಾನೂನು ಕ್ಷೇತ್ರಗಳ ಮೇಲೆ ಸವಾಲುಗಳು ಸಹ ಹೆಚ್ಚುತ್ತಿವೆ ಎಂಬುದರ ಕುರಿತು ಅವರು ವಿವರಿಸಿದರು. ಈ ಸವಾಲುಗಳನ್ನು ಎದುರಿಸಿ ತಂತ್ರಜಾನ ಮೂಲಕವೇ ಪರಿಹಾರ ಕಂಡುಕೊಳ್ಳಲು ಕಾನೂನು ಕ್ಷೇತ್ರದ ತಜ್ಞರು ಮತ್ತು ತಂತ್ರಜ್ಞರು ಸಹಯೋಗದಲ್ಲಿ ಕೆಲಸ ಮಾಡುವುದು ಅವಶ್ಯಕ್ ಇದೆ ಎಂದು ತಿಳಿಸಿ ಈ ದೆಶೆಯಲ್ಲಿ ಈ ರೀತಿಯ ಸ್ಪರ್ಧೆಗಳು ಸುಲಭ ಪರಿಹಾರಗಳ ಜೊತೆಗೆ ತಾಂತ್ರಿಕ ಪರಿಕರಗಳನ್ನು ಕಂಡುಕೊಳ್ಳಬಹದು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿ ಟಿ ಯು ಕುಲಪತಿ ಪ್ರೊ.ವಿದ್ಯಾಶಂಕರ ಎಸ್. ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 7ನೇ ಆವೃತ್ತಿಯ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಎಸ್‌ಐಎಚ್) 2024 ಫೈನಲ್ ನಡೆಸಲು ವಿ ಟಿ ಯು ನೋಡಲ್ ಕೇಂದ್ರವಾಗಿ ಆಯ್ಕೆಯಾಗಿದ್ದು ಒಂದು ಐತಿಹಾಸಿಕ ಕ್ಷಣ ಎಂದು ಹೇಳಿದರು. ಇದಕ್ಕೆ ಅವರು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ (ಒಠ) ಮತ್ತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ (ಎ ಐ ಸಿ ಟಿ ಈ) ನವ ದೆಹಲಿಗೆ ಕೃತಜ್ಞತೆ ತಿಳಿಸಿದರು. ಇದು ನಮ್ಮ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ನಾವೀನ್ಯತೆ ಮತ್ತು ಸಂಶೋಧನೆ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರೋತ್ಸಾಹಿಸುವ ವಿ ಟಿ ಯು ನ ಉದ್ದೇಶಕ್ಕೆ ಮತ್ತಷ್ಟು ಬಲ ತುಂಬಿದೆ ಎಂದು ಹೇಳಿದರು. ಇದು ಖಂಡಿತವಾಗಿಯೂ ನಮ್ಮ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುತ್ತದೆ. ಸಂಶೋಧನೆ ಮತ್ತು ನಾವೀನ್ಯತೆ ಸಂಸ್ಕೃತಿಯನ್ನು ಉತ್ತೇಜಿಸಲು ವಿಟಿಯು ಬದ್ಧವಾಗಿದೆ ಹಾಗೂ ವಿಟಿಯು ಕ್ಯಾಂಪಸ್‌ಗಳಲ್ಲಿ ಮಾತ್ರವಲ್ಲದೆ ಎಲ್ಲಾ ಸಂಯೋಜಿತ ಕಾಲೇಜುಗಳಲ್ಲಿಯು ಸಹ ಈ ಕೌಶಲ್ಯ, ಸಂಶೋಧನಾ ಮತ್ತು ನಾವಿನ್ಯತಾ ಅವಲಂಬಿತ ಕಲಿಕಾ ವಿಧಾನವನ್ನು ತರಲಾಗುತ್ತಿದೆ ಎಂದು ಹೇಳಿದರು.
ಈ ದಿಶೆಯಲ್ಲಿ ವಿ ಟಿ ಯು ಇವತ್ತಿನ ಅವಶ್ಯಕ ವಿಷಯಗಳಾದ ಆಟೊಮೇಷನ್, ಡ್ರೋನ್ ತಂತ್ರಜ್ಞಾನ, ಗಿಐಖಋ ವಿನ್ಯಾಸ, ಂಋ ಮತ್ತು ಋಖಿ ಉತ್ಕೃಷ್ಟತಾ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿದೆ ಮತ್ತು ಮುಂದಿನ ದಿನಗಳಲ್ಲಿ ಪ್ರತಿಷ್ಠಿತ ಏನ್ವಿಡಿಯಾ, ಸ್ಯಾಂಸಂಗ್, ಸ್ನಾಯಡರ್, ಕಂಪನಿಗಳ ಸಹಯೋಗದಲ್ಲಿ ಹೆಚ್ಚಿನ ಅಧ್ಯಯನ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್.ಶ್ರೀನಿವಾಸ, ನೋಡಲ್ ಕೇಂದ್ರದ ಮುಖ್ಯಸ್ಥ ಆನಂದ ಕುಲಕರ್ಣಿ, ನೋಡಲ್ ಕೇಂದ್ರದ ಪ್ರಭಾರಿ ಪ್ರೊ.ಎಸ್.ಎ.ಅಂಗಡಿ ಉಪಸ್ಥಿತರಿದ್ದರು.