ಸಂಗೋಗಿ ಮತ್ತು ತೆಗ್ಗಿಹಳ್ಳಿ ಗ್ರಾಮಗಳಿಗೆ 24ಥ7 ನೀರು ಸರಬರಾಜು:ಬಂಡಿ
24x7 water supply to Sangogi and Theggihalli villages: Bandi
ಲೋಕದರ್ಶನ ವರದಿ
ಸಂಗೋಗಿ ಮತ್ತು ತೆಗ್ಗಿಹಳ್ಳಿ ಗ್ರಾಮಗಳಿಗೆ 24ಥ7 ನೀರು ಸರಬರಾಜು:ಬಂಡಿ
ಇಂಡಿ 09: ತಾಲೂಕಿನ ಸಂಗೋಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಗೋಗಿ ಹಾಗೂ ತೆಗ್ಗಿಹಳ್ಳಿ ಗ್ರಾಮಗಳಿಗೆ ಜನಜೀವನ್ ಮಿಷನ್ ಹಾಗೂ ಕರ್ನಾಟಕ ಸುಸ್ಥಿರ ಗ್ರಾಮಿಣ ಕುಡಿಯುವ ನೀರು ಸರಬರಾಜು ಯೋಜನೆ ಅಡಿಯಲ್ಲಿ ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ 24ಥ7 ನೀರು ಸರಬರಾಜು ಗ್ರಾಮ ಎಂದು ಘೋಷಣೆ ಮಾಡಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪ ವಿಭಾಗ ಇಂಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಆರ್ ಎಂ ಬಂಡಿ ಅವರು ಹೇಳಿದರು.
ಸಂಗೋಗಿ ಗ್ರಾ.ಪಂ. ಅಧ್ಯಕ್ಷರಾದ ಚೌಡವ್ವ ಹಿರೇಗೆಪ್ಪ ಸನತಂಗಿ ಅವರು ನಳದಿಂದ ನೀರು ತಿರುಗಿಸುವ ಮೂಲಕ ಚಾಲನೆ ನೀಡಿದರು.ಜಲಜೀವನ್ ಮಿಷನ್ ಹಾಗೂ ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಅಡಿಯಲ್ಲಿ ತಾಲ್ಲೂಕಿನ ಸಂಗೋಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಗೋಗಿ ಹಾಗೂ ತೆಗ್ಗಿಹಳ್ಳಿ ಗ್ರಾಮಗಳನ್ನು 24ಥ7 ನಿರಂತರ ಕುಡಿಯುವ ನೀರು ಸರಬರಾಜು ಗ್ರಾಮಗಳೆಂದು ಘೋಷಣೆ ಮಾಡಿದ್ದು ಸಂತಸ ತಂದಿದೆ ಎಂದು ಹೇಳಿದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಮಾಲೋಚಕರಾದ ಸಚೀನ ಸಿಠ ಅವರು ಮಾತನಾಡಿ ವಿಶ್ವ ಬ್ಯಾಂಕ್ ನೀಡಿರುವ ಶರತ್ತುಗಳನ್ನು ವಿವರಿಸಿ ಎರಡೂ ಗ್ರಾಮದಲ್ಲಿ 24ಥ7 ಕುಡಿಯುವ ನೀರು ಸರಬರಾಜು ಆಗುತ್ತಿರುವುದಿಂದ ನೀರಿನ ಮಿತ ಬಳಕೆ, ನೀರಿನ ಗುಣಮಟ್ಟ, ಕಾರ್ಯಾಚರಣೆ ನಿರ್ವಹಣೆ ಕುರಿತು ಗ್ರಾಮಸ್ಥರ ಮೇಲ್ವಿಚಾರಣೆಯಲ್ಲಿ ನಿರ್ವಹಿಸುವಂತೆ ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪ ವಿಭಾಗ ಇಂಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಆರ್ ಎಂ ಬಂಡಿ ಮಾತನಾಡಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ನಿರ್ದೇಶನದ ಮೇರೆಗೆ ಇಂಡಿ ತಾಲ್ಲೂಕಿನ ಸಂಗೋಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಗೋಗಿ ಹಾಗೂ ತೆಗ್ಗಿಹಳ್ಳಿ ಗ್ರಾಮಗಳನ್ನು 24ಥ7 ನಿರಂತರ ಕುಡಿಯುವ ನೀರು ಸರಬರಾಜು ಗ್ರಾಮವೆಂದು ಅ. 09 ರಂದು ಘೋಷಣೆ ಮಾಡಲಾಗಿದ್ದು, ಇದರಿಂದಾಗಿ ನಿರಂತರ ಕುಡಿಯುವ ನೀರು ಸರಬರಾಜು ಗ್ರಾಮಗಳೆಂದು ಜಿಲ್ಲೆಯಲ್ಲಿ ಘೋಷಣೆಯಾದ ಮೂರು ಮತ್ತು ನಾಲ್ಕನೇ ಗ್ರಾಮಗಳಾಗಿವೆ. ಎರಡೂ ಗ್ರಾಮದಲ್ಲಿ 24ಥ7 ಕುಡಿಯುವ ನೀರು ಸರಬರಾಜು ಆಗುತ್ತಿರುವುದಿಂದ ಇದನ್ನು ಸುಸ್ತೀರತೆಯಿಂದ ಕಾಯ್ದುಕೊಳ್ಳಲು ನೀರಿನ ಮಿತ ಬಳಕೆ, ನೀರಿನ ಗುಣಮಟ್ಟ, ಕಾರ್ಯಾಚರಣೆ ನಿರ್ವಹಣೆ ಕುರಿತು ಗ್ರಾಮಸ್ಥರ ಮೇಲ್ವಿಚಾರಣೆಯಲ್ಲಿ ನಿರ್ವಹಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಇಂಜಿನಿಯರ್ ಶಶಿಧರ್ ಮತ್ತು ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು. ಸಂಗೋಗಿ ಗ್ರಾಮ ಪಂಚಾಯಿತಿ ಅಬಿವೃದ್ಧಿ ಪಂಚಾಯ ಅಶೋಕ ಹೊನವಾಡ ಸ್ವಾಗತಿಸಿದರು. ಜಿಲ್ಲಾ ತಾಂತ್ರಿಕ ಸಮಾಲೋಚಕ ತಂಡ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಇಂಡಿ, ಜಿಲ್ಲಾ ಯೋಜನಾ ವ್ಯವಸ್ಥಾಪಕರು ವಿಜಯಪುರರವರು ಹಾಗೂ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಸಾರ್ವಜನಿಕರು ಮಹಿಳೆಯರು ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 