ಮಾದಕ ವಸ್ತು ಮಾರಾಟ ಮಾಡುತ್ತಿದ್ದವರ ಬಂಧನ: 23 ಲಕ್ಷ ರೂ ಮೌಲ್ಯದ ವಸ್ತುಗಳ ವಶ

ಬೆಂಗಳೂರು, ಮಾ.4 ,ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಆರು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿ, 23 ಲಕ್ಷ ರೂ ಮೌಲ್ಯದ ಮಾದಕ ವಸ್ತು ಗಾಂಜಾ ವಶಪಡಿಸಿಕೊಂಡಿದ್ದಾರೆ. ಇಂದಿರಾನಗರ ಹಾಗೂ ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಕಡೆ ಸಿಸಿಬಿ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ.ಆಂಧ್ರಪ್ರದೇಶದ ಮೂಲದ ಸವರ ಕವಿತಾ (23), ಕಿಲ್ಲೊ ಧನುರ್ಜೈ (25), ಪಂಗಿ ಮಾತ್ಯರಾಜು (26), ಉಪ್ಪಲಪಟ್ಟಿ ಸುಬ್ಬಾರೆಡ್ಡಿ (42), ಗೌರವ್ (25), ಮಹ್ಮದ್ ಅಮ್ಮರ್ ಶಂಷಾದ್ (22) ಬಂಧಿತ ಆರೋಪಿಗಳು.ಬಂಧಿತರು ಆಂಧ್ರಪ್ರದೇಶದ ವೈಜಾಕ್ ನಿಂದ ಬಸ್ಸಿನಲ್ಲಿ ಮಾದಕ ವಸ್ತು ತಂದು ತಮ್ಮ ಪರಿಚಿತ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಬಂಧಿತರಿಂದ 43 ಕೆಜಿ ಗಾಂಜಾ, 6 ಮೊಬೈಲ್ ಫೋನ್, 20,000 ನಗದು, ಒಂದು ಬೈಕ್ ಸೇರಿ 23ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳ ವಿರುದ್ಧ ಇಂದಿರಾ ನಗರ, ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.