ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 20ನೇ ವರ್ಷದ ಪದವಿ ಪ್ರಧಾನ
20th year graduation principal at Agadi Engineering College
ಲಕ್ಷ್ಮೇಶ್ವರ" 26: ಪಟ್ಟಣದ ಹೆಸರಾಂತ ಶ್ರೀಮತಿ ಕಮಲಾ ಮತ್ತು ವೆಂಕಪ್ಪ ಎಮ್ ಅಗಡಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾ ವಿದ್ಯಾಲಯದಲ್ಲಿ 2026 - 20ನೇ ವರ್ಷದ ಪದವಿ ಪ್ರಧಾನ ಕಾರ್ಯಕ್ರಮವು ಕಾಲೇಜ್ ಆವರಣದಲ್ಲಿ ಸಂಭ್ರಮದೊಂದಿಗೆ ನಡೆಯಿತು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪದ್ಮಭೂಷಣ ಗಂಗೂಬಾಯಿ ಹಾನಗಲ್ಲ ಅವರ ಅಮೃತ ಹಸ್ತದಿಂದ ಶಾರದಾ ಶಾವಿನಿ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಕುಲಕರ್ಣಿ ಅವರು 20ನೇ ವರ್ಷದ ಪದವಿ ಪ್ರಧಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ನನ್ನ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಲಕ್ಷ್ಮೀಶರ ಪಟ್ಟಣದಲ್ಲಿ ಮುಗಿಸಿದ್ದೇನೆ 62 ವರ್ಷದಲ್ಲಿ ಲಕ್ಷ್ಮೇಶ್ವರ ಸಂಪೂರ್ಣವಾಗಿ ಬದಲಾಗಿದೆ ವಾ ಇಡೀ ಜಗತ್ತಿನ ಜನ ಕೂಡ ಲಕ್ಷ್ಮೇಶ್ವರವನ್ನು ಹುಡುಕಿಕೊಂಡು ಬರಬೇಕು ಆ ಮಟ್ಟದಲ್ಲಿ ಮುನ್ನಡೆದಿದ್ದು ಸಂತೋಷದ ವಿಷಯವಾಗಿದೆ.
ಅದರಲ್ಲಿಯೂ ಲಕ್ಷ್ಮೇಶ್ವರ ಪಟ್ಟಣದಲ್ಲಿ ಇಂಥ ದೊಡ್ಡ ಎಲ್ಲ ವಿಭಾಗದ ಅಗಡಿ ಇಂಜಿನಿಯರಿಂಗ್ ಕಾಲೇಜ್ ನಿರ್ಮಾಣವಾಗಿದ್ದು ಎಲ್ಲ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿಗಳ ಪಾಲಕರಿಗೂ ಎಲ್ಲ ರೀತಿಯಿಂದ ಅನುಕೂಲಕರವಾಗಿದೆ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ಉನ್ನತ ಮಟ್ಟದ ಗುರಿಯನ್ನು ಮುಟ್ಟಬೇಕು ಎಂದು ಪದವಿ ಮುಗಿಸಿದ ಎಲ್ಲ ವಿಭಾಗದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಮತ್ತು ಇಂಜಿನಿಯರಿಂಗ್ ಕೋರ್ಸ್ ಮಾಡುತ್ತಿರುವ ಎಲ್ಲ ವಿಭಾಗದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ ಪರಶುರಾಮ್ ಬಾರ್ಕಿ ಡಾ ಸುಭಾಷ್ ಮೇಟಿ ಡಾ ಆರ್ ಎಂ ಪಾಟೀಲ್ ಡಾ ವಿಕ್ರಂ ಶಿರೋಳ ಡಾ ಸಂತೋಷ್ ಗುಜರಿ ಡಾ ಅರುಣ ಕುಂಬಿ ಸಪ್ನಾ ಚನಗೌಡರ ಗೀರೀಶ ಎತ್ತಿನಹಳ್ಳಿ ಶಿವರಾಜ್ ಹಿರೇಮಠ ಸೋಮಶೇಖರ್ ಕೇರಿಮನಿ ಸೇರಿದಂತೆ ಕಾಲೇಜಿನ ಎಲ್ಲಾ ಶಿಕ್ಷಕರುಂದದವರು ಎಲ್ಲ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರ
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 