ಮನಿಲಾ, ಏ.16, ಕಳೆದ 24 ಗಂಟೆಗಳಲ್ಲಿ ಫಿಲಿಪೈನ್ಸ್‌ನಲ್ಲಿ 207 ಹೊಸ ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ದೃಢಪಟ್ಟ ಒಟ್ಟು ರೋಗ ಪೀಡಿತರ ಸಂಖ್ಯೆ 5660ಗೆ ಏರಿಕೆಯಾಗಿದೆ ಎಂದು ಇಲ್ಲಿನ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.ಈ ನಿರ್ದಿಷ್ಟ ಅವಧಿಯಲ್ಲಿ 13 ಜನರು ಸಾವಿಗೀಡಾಗಿದ್ದು ಸಚಿವಾಲಯದ ಪ್ರಕಾರ ಈವರೆಗೆ ಫಿಲಿಪೈನ್‌ನಲ್ಲಿ 362 ಮಂದಿ ಮೃತಪಟ್ಟಿದ್ದು 435 ಜನರು ಗುಣಮುಖರಾಗಿದ್ದಾರೆ.ಜಾನ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ಜಾಗತಿಕವಾಗಿ 20 ಲಕ್ಷ ಜನರು ಕೊರೋನಾ ವೈರಸ್ ಭಾದಿತರಾಗಿದ್ದು 1 ಲಕ್ಷ 37 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. 5 ಲಕ್ಷದ 18 ಸಾವಿರ ಮಂದಿ ಆಶ್ಚರ್ಯಕರ ರೀತಿಯಲ್ಲಿ ಚೇತರಿಸಿಕೊಂಡಿದ್ದಾರೆ.