ಲೋಕದಾಲತ್ ನಲ್ಲಿ 2021 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ
ಮುದ್ದೇಬಿಹಾಳ 15: ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಇಂದು ದಿನಾಂಕ 14/12/2024 ರಂದು ನ್ಯಾಯಾಲಯಗಳ ಸಂಕೀರ್ಣ ಮುದ್ದೇಬಿಹಾಳದಲ್ಲಿ ರಾಷ್ಟ್ರೀಯ ಲೋಕ ಅದಾಲತನ್ನು ಏರಿ್ಡಸಲಾಗಿತ್ತು. ಲೋಕ ಅದಾಲತ್ ನಲ್ಲಿ ಎರಡು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಒಟ್ಟು 7631 ಬಾಕಿ ಇರುವ ಪ್ರಕರಣಗಳಲ್ಲಿ 2583 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು ಸದರಿ ಪ್ರಕರಣಗಳಲ್ಲಿ ಒಟ್ಟು 2021 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
ಅದರಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣ ಗಳು, ಮೆಂಟೇನೆನ್ಸ್ ಪ್ರಕರಣಗಳು , ಪಾಲು ವಾಟ್ನಿ ದಾವೆಗಳು, ಎಲ್ ಎ ಸಿ ಇಪಿ ಪ್ರಕರಣಗಳು , ಎಮ್ ವಿ ಸಿ, ಇ ಪಿ ಪ್ರಕರಣಗಳು , ಅಪರಾಧ ದಂಡ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು. ಮತ್ತು ಪೂರ್ವದಾವೆ (ಕಐಅ ಅಛಿ) ಪ್ರಕರಣಗಳಲ್ಲಿ, ಟ್ರಾಫಿಕ್ ಚಲನ್ ಪ್ರಕರಣಗಳು, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಹಾಗೂ ಬ್ಯಾಂಕಿನ ಪ್ರಕರಣಗಳು, ಒಟ್ಟು ಸೇರಿ.1944 ಪ್ರಕರಣಗಳಲ್ಲಿ 588 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. ಸದರಿ ಮೇಲ್ಕಾಣಿಸಿದ ಪ್ರಕರಣಗಳನ್ನು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ರವೀಂದ್ರಕುಮಾರ ಬಿ ಕಟ್ಟಿಮನಿ . ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಸಂಪತ್ತಕುಮಾರ ಬಳೊಲಗಿಡದ ಇವರುಗಳು ರಾಜೀಸಂಧಾನದ ಮೂಲಕ ಇತ್ಯರ್ಥ್ ಪಡಿಸಿರುತ್ತಾರೆ. ಸದರಿ ಲೋಕ ಅದಾಲತ್ ನಲ್ಲಿ ನ್ಯಾಯಾಂಗ ಸಂಧಾನಕಾರರಾಗಿ ಎಮ್. ಎ. ಲಿಂಗಸೂರ ಹಾಗೂ ಯಮನಪ್ಪ ಯಮನಪ್ಪ , ವಕೀಲರುಗಳು, ಹಾಗೂ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಶಶಿಕಾಂತ ಮಾಲಗತ್ತಿ ಮತ್ತು ತಾಲೂಕಾ ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕರಾದ ಹಾಗೂ ನ್ಯಾಯಾಲಯ ಸಿಬ್ಬಂದಿಗಳಾದ ಅರವಿಂದ ಕುಂಬಾರ, ಪ್ರ. ದ. ಸ. ಎ. ಎಸ್. ಮುಜಾವರ ,ಪುನೀತ,ಆರ್ ಎಸ್ ಕಮ್ಮಾರ್,ಬಸವರಾಜ ಬೂದಿಹಾಳ,ನರ್ಮದಾ ಮರೋಳ, ಗೀತಾ ರಾಂಪುರ್,ರೇಣುಕಾ ಜಾನಮಟ್ಟಿ, ಜ್ಯೋತಿ ಹೆಬ್ಬಾಳ,ಮಹಾಂತೇಶ ಹಚ್ಚರೆಡ್ಡಿ,ಮಂಜುಳಾ ಹೊಸಮನಿ , ಎನ್ ಬಿ ಮದಿಹಳ್ಳಿ, ಇಸಾಕ್ ಒಂಟಿ, ನಾಗರೆಡ್ಡಿ ಪೊಲೀಸ್, ಚಪ್ಪರಬಂಧ ಪೊಲೀಸ್ ಇವರುಗಳು ಭಾಗವಹಿಸಿದ್ದರು.
ಸದರಿ ಲೋಕ ಅದಾಲತ್ ನಲ್ಲಿ ಶಿರಸ್ತೇದಾರರಾದ ಎಮ್. ಎಫ್. ಜೇವರಗಿ .ಸುರೇಶ ಬಳಗಾನೂರ. ಹಾಗೂ ನ್ಯಾಯವಾದಿಗಳಾದ ವಿ. ಎಮ್. ನಾಗಠಾಣ, ಜೆ.ಎ. ಚೀನಿವಾರ, ಎಸ್. ಆರ್. ಸಜ್ಜನ. ಏನ್. ಜಿ. ಕುಲಕರ್ಣಿ. ಏನ್. ಆರ್. ಮೋಕಾಶಿ. ಎಮ್. ಆರ್. ಪಾಟೀಲ. ಚೇತನ್ ಶಿವಶಿಂಪಿ. ಬಿ. ಎಮ್. ಮುಂದಿನಮನಿ. ಆಯ್. ಎಸ್. ಹಗಟಗಿ. ಎಲ್ ಆರ್ ನಾಲತವಾಡ, ಚಿಲ್ಲಾಳಶೆಟ್ಟರ್. ಕಿಣಗಿ. ಹಗಟಗಿ. ಮೇಟಿ.ಇನ್ನಿತರ ಎಲ್ಲ ನ್ಯಾಯವಾದಿಗಳು ನ್ಯಾಯಾಲಯದ ಎಲ್ಲ ಸಿಬ್ಬಂದಿಗಳು ಭಾಗವಹಿಸಿದ್ದರು .