ಕ್ರೈಸ್ಟ್ ಚರ್ಚ್ ನಲ್ಲಿ 2021ರ ಮಹಿಳಾ ವಿಶ್ವಕಪ್ ಫೈನಲ್

ನವದೆಹಲಿ, ಜ.23, ನ್ಯೂಜಿಲೆಂಡ್ ನ ಖ್ಯಾತ ಮೈದಾನವಾದ ಕ್ರೈಸ್ಟ್ ಚರ್ಚ್ ಅಂಗಳ ಮುಂದಿನ ವರ್ಷ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್ ಫೈನಲ್ ಗೆ ಆತಿಥ್ಯ ನೀಡಲಿದೆ. ಆರು ಮೈದಾನದಲ್ಲಿ, ಫೆ.6 ರಿಂದ ಮಾರ್ಚ್ 7ರ ವರೆಗೆ ಟೂರ್ನಿ ನಡೆಯಲಿದೆ. “ಆಕ್ಲೆಂಡ್ ನ ಈಡನ್ ಪಾರ್ಕ್‌ನಲ್ಲಿ ಟೂರ್ನಿಯ ಮೊದಲ ಪಂದ್ಯ ನಡೆಯಲಿದ್ದು, ವೆಲ್ಲಿಂಗ್ಟನ್, ಹ್ಯಾಮಿಲ್ಟನ್, ಟೌರಂಗಾ, ಡುನೆಡಿನ್ ಮತ್ತು ಕ್ರೈಸ್ಟ್‌ಚರ್ಚ್‌ನಲ್ಲಿನ ಪಂದ್ಯ ಆಯೋಜಿಸಲಾಗಿದೆ” ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರಕಟಣೆಯಲ್ಲಿ ತಿಳಿಸಿದೆ. 50 ಓವರ್ ಗಳ ಮಹಿಳಾ ವಿಶ್ವಕಪ್ ಪಂದ್ಯದ ಚಾಂಪಿಯನ್ ಪಟ್ಟ ಅಲಂಕರಿಸಲು ಎಂಟು ತಂಡಗಳು ಕಾದಾಟ ನಡೆಸಲಿವೆ. ಆರು ನಗರಗಳಲ್ಲಿ ಒಟ್ಟು 31 ಪಂದ್ಯ ನಡೆಯಲಿದೆ. ಆತಿಥೇಯ ನ್ಯೂಜಿಲೆಂಡ್ ಹಾಗೂ ಐಸಿಸಿಯ ಅಗ್ರ ಶ್ರೇಯಾಂಕಿತ ತಂಡಗಳು ನೇರವಾಗಿ ಪ್ರವೇಶ ಪಡೆಯಲಿವೆ. ಅರ್ಹತಾ ಸುತ್ತಿನಲ್ಲಿ ಜಯಗಳಿಸಿದ ಮೂರು ತಂಡಗಳು ಪ್ರಧಾನ ಸುತ್ತಿಗೆ ಪ್ರವೇಶ ಪಡೆಯಲಿವೆ. ಆಸ್ಟ್ರೇಲಿಯಾ, ಹಾಲಿ ಚಾಂಪಿಯನ್ ಇಂಗ್ಲೆಂಡ್, 2017 ರ ಫೈನಲಿಸ್ಟ್‌ಗಳಾದ ಭಾರತ ಮತ್ತು ಪಾಕಿಸ್ತಾನಗಳು ಪ್ರಸ್ತುತ ಅಗ್ರ ನಾಲ್ಕು ಸ್ಥಾನ ಪಡೆದಿವೆ.