ವಿಜಯಪುರ 18: ನಗರದಲ್ಲಿರುವ ಸರಕಾರಿ ನೌಕರರ ಸಹಕಾರಿ ಬ್ಯಾಂಕ್ ವಿಜಯಪುರ (ಜಿ.ಓ.ಸಿ.ಸಿ ಬ್ಯಾಂಕ)ದಿಂದ ಕೋವಿಡ-19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬ್ಯಾಂಕಿನ ಅಧ್ಯಕ್ಷರಾದ ಸುರೇಶ ಶೇಡಶ್ಯಾಳ ಎಲ್ಲ ನಿದರ್ೇಶಕರು ಹಾಗೂ ಬ್ಯಾಂಕಿನ ಸಿಬ್ಬಂದಿ ಕೂಡಿಕೊಂಡು 2ಲಕ್ಷ ರೂಪಾಯಿಗಳ ದೇಣಿಗೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.
ಅವಿಭಜಿತ ವಿಜಯಪುರ, ಬಾಗಲಕೋಟ ಜಿಲ್ಲೆಯ ಸರಕಾರಿ ನೌಕರರ ಸಹಕಾರಿ ಬ್ಯಾಂಕ ವಿಜಯಪುರ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರಿಂದ ಕೋವಿಡ-19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಲಕ್ಷ ರೂಪಾಯಿಗಳ ದೇಣಿಗೆಯನ್ನು ವಿಜಯಪುರ ಅಫರ್ ಜಿಲ್ಲಾಧಿಕಾರಿಗಳಾದ ಡಾ. ಔದ್ರಾಮ ಅವರಿಗೆ ನೀಡಿದರು.
ನಂತರ ಬ್ಯಾಂಕಿನ ಅಧ್ಯಕ್ಷರಾದ ಸುರೇಶ ಶಡಶ್ಯಾಳರವರು ಮಾತನಾಡಿ ಕೋರನಾ ಹೆಮ್ಮಾರಿಯನ್ನು ತಡೆಗಟ್ಟಲು ನಮ್ಮ ಜಿಲ್ಲಾಡಳಿತವು ಹಗಲಿರುಳು ಶ್ರಮಿಸುತ್ತಿದ್ದು, ಅದಕ್ಕೆ ಜನರ ಹಾಗೂ ಸಂಘ ಸಂಸ್ಥೆಗಳ ಸಹಕಾರವು ಅಷ್ಟೆ ಮುಖ್ಯವಾಗಿದೆ. ಈ ಸಂದರ್ಭದಲ್ಲಿ ಸರಕಾರಕ್ಕೆ ಆಥರ್ಿಕ ಬೆಂಬಲ ಬೇಕಾಗುತ್ತದೆ, ಈಗಾಗಲೇ ಸಾಕಷ್ಟು ಜನ ಶ್ರೀಮಂತರು, ಸಂಘ ಸಂಸ್ಥೆಗಳ ಜನಪ್ರತಿನಿಧಿಗಳು, ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಕೈಲಾದಷ್ಟು ದೇಣಿಗೆ ನೀಡಿದ್ದಾರೆ, ಇಂತಹ ಸಂದರ್ಭದಲ್ಲಿ ಮಾನವೀಯತೆಯ ನೆಲೆಗಟ್ಟಿನ ಮೇಲೆ ಎಲ್ಲರೂ ಸರಕಾರದೊಂದಿಗೆ ಅಥರ್ಿಕವಾಗಿ ಕೈಜೋಡಿಸುವುದು ಅಗತ್ಯವಾಗಿದೆ, ರಾಜ್ಯದ ಸರಕಾರಿ ನೌಕರರು ಸಹ ಒಂದು ದಿನದ ವೇತನವನ್ನು ದೇಣಿಗೆ ನೀಡಿದ್ದಾರೆ, ಅದರಂತೆ ನಮ್ಮ ಸಹಕಾರಿ ಬ್ಯಾಂಕಿನಿಂದ 2 ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಸುರೇಶ ಚನಬಸಪ್ಪ ಶಡಶ್ಯಾಳ, ಉಪಾಧ್ಯಕ್ಷರಾದ ಸದಾಶಿವ ಭೀಮಪ್ಪ ದಳವಾಯಿ, ನಿದರ್ೇಶಕರುಗಳಾದ ಅಜರ್ುನ ಜಿ ಲಮಾಣಿ, ಜಯಶ್ರೀ ಸಿದ್ದಪ್ಪ ಬೆಣ್ಣಿ, ಹಣಮಂತ ಬಸಗೊಂಡಪ್ಪ ಕೊಣದಿ, ಅಲ್ಲಾಭಕ್ಷ ಎಮ್ ವಾಲಿಕಾರ, ಉಮೇಶ ನಾಗಪ್ಪ ಗುಡ್ನಾಳ, ಅಶೋಕ ವಿಠ್ಠಲ ಚನಬಸಗೋಳ, ನೀಲಾ ಲಕ್ಷ್ಮಣ ಇಂಗಳೆ, ಹಾಗೂ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರು, ವ್ಯವಸ್ಥಾಪಕರು ಹಾಜರಿದ್ದರು.