ಮಹಾನಗರ ಪಾಲಿಕೆ ವತಿಯಿಂದ 2 ಮುಕ್ತಿವಾಹನಗಳ ಲೋಕಾರೆ್ಣ
2 Mukti Vahanas launched by the Metropolitan Corporation
ಬೆಳಗಾವಿ 25: ಇಲ್ಲಿನ ಮಹಾನರ ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ ಅಂತ್ಯ ಸಂಸ್ಕಾರ ಮಾಡುವ ನಿಟ್ಟಿನಲ್ಲಿ, ಪಾಲಿಕೆಯು ನೂತನ ಎರಡು ಅತ್ಯಾಧುನಿಕ ಮುಕ್ತಿ ವಾಹನಗಳನ್ನು, ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಮಹಾಪೌರ ಮಂಗೇಶ್ ಪವಾರ್, ಉಪ ಮಹಾಪೌರ ವಾಣಿ ಜೋಷಿ, ನೇತ್ರತ್ವದಲ್ಲಿ ಹಸಿರು ನಿಶಾನೆ ತೋರಿಸುವುದರ ಮೂಲಕ ಲೋಕಾರೆ್ಣಗೊಳಿಸಿದರು.
ನೂತನ ಎರಡು ಶವಗಾರ ವಾಹನಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ, ಶಾಸಕ ಆಸೀಫ್ ಸೇಠ್ ಅವರು ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ 2 ಅತ್ಯಾಧುನಿಕ ಮುಕ್ತಿವಾಹನ ಶವವಾಹಕಗಳನ್ನು ಖರೀದಿಸಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೆರಡು ವಾಹನಗಳನ್ನು ಖರೀದಿಸುವ ಚಿಂತನೆಯಿದೆ. ಅಧಿಕಾರಿಗಳು ಈಗಾಗಲೇ ಕೆಲಸ ನಿರ್ವಹಿಸುತ್ತಿದ್ದು, ಡೈರಿ ಮೆಂಟೆನ್ ಮಾಡಿ ವಾಹನಗಳನ್ನು ನಿರ್ವಹಿಸಬೇಕು.
ಎಲ್ಲರೂ ಒಗ್ಗೂಡಿ ಬೆಳಗಾವಿಯ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು. ಕಳೆದ ಬಾರಿ ಶವ ಸಂಸ್ಥಾನದ ವಾಹನಗಳ ಎಂಜಿನ್ ಸೀಜ್ ಆಗಿದೆ. ಅದೇ ರೀತಿ ಮತ್ತೆ ಮರುಕಳಿಸಿದರೇ, ಅದಕ್ಕೆ ಪಾಲಿಕೆಯ ಅಧಿಕಾರಿಗಳೆ ನೇರ ಹೊಣೆಯಾಗಲಿದ್ದಾರೆ. ಹಾಗೂ ನಿಮ್ಮ ವೇತನದಲ್ಲೇ ಅವುಗಳನ್ನು ಕಡಿತಗೊಳಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಪಾಲಿಕೆ ಆಯುಕ್ತ ಕಾರ್ತಿಕ್ ಎಮ್, ನಗರ ಸೇವಕರು, ಪಾಲಿಕೆ ಅಧಿಕಾರಿಗಳು ಭಾಗವಹಿಸಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 