ಚೀನಾದಲ್ಲಿ 24 ತಾಸಿನಲ್ಲಿ 19 ಹೊಸ ಕೊವಿದ್-19 ಪ್ರಕರಣಗಳು ದೃಢ, ನಾಲ್ವರು ಸಾವು

ಬೀಜಿಂಗ್, ಏಪ್ರಿಲ್ 4,ಚೀನಾದಲ್ಲಿ ಕಳೆದ 24 ತಾಸಿನಲ್ಲಿ ಹೊಸದಾಗಿ ಹೊರಗಿನಿಂದ ಬಂದ 18 ಕೊವಿದ್ -19 ಸೋಂಕಿನ ಪ್ರಕರಣಗಳು ದೃಢಪಟ್ಟಿದ್ದು, ಒಂದು ಪ್ರಕರಣ ಆಂತರಿಕವಾಗಿ ಹರಡಿದೆ ಎಂದು ಅಲ್ಲಿನ  ರಾಷ್ಟ್ರೀಯ ಆರೋಗ್ಯ ಆಯೋಗ ಶನಿವಾರ ತಿಳಿಸಿದೆ.ಸೋಂಕಿನಿಂದ ಕಳೆದ 24 ತಾಸಿನಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಚೀನಾದಲ್ಲಿ ಹೊರಗಿನಿಂದ ಬಂದ ಕೊವಿದ್-19 ಪ್ರಕರಣಗಳ ಸಂಖ್ಯೆ 888 ತಲುಪಿದೆ ಎಂದು ಆಯೋಗ ತಿಳಿಸಿದೆ.
‘ರಾಷ್ಟ್ರೀಯ ಆರೋಗ್ಯ ಆಯೋಗ 31 ಪ್ರಾಂತ್ಯಗಳಿಂದ ಹೊಸ ರೀತಿಯ ಕರೋನವೈರಸ್ನಿಂದ ಹರಡಿದ 81,639 ನ್ಯುಮೋನಿಯಾ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದೆ. ಈ ಪೈಕಿ 1,562 ಜನರು ಅಸ್ವಸ್ಥರಾಗಿದ್ದು. 331 ಜನರು ಗಂಭೀರ ಸ್ಥಿತಿಯಲ್ಲಿದ್ದರೆ, 3,326 ಮಂದಿ ಸಾವನ್ನಪ್ಪಿದ್ದಾರೆ.  76,751 ಜನರನ್ನು ಆಸ್ಪತ್ರೆಗಳಿಂದ ಮನೆಗೆ ಕಳುಹಿಸಲಾಗಿದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಕರೋನವೈರಸ್ನ ಒಂದು ಹೊಸ ಪ್ರಕರಣ  ಹುಬೈ ಪ್ರಾಂತ್ಯದಲ್ಲಿ ವರದಿಯಾಗಿದೆ. ಇದೇ ಪ್ರಾಂತ್ಯದ ವುಹಾನ್ ನಗರದಲ್ಲಿ ಮೊದಲ ಕೊರೊನವೈರಸ್ ಸೋಂಕು ಪತ್ತೆಯಾಗಿತ್ತು. ಚೀನಾದ ಸ್ವಾಯತ್ತ ಪ್ರದೇಶವಾದ ಹಾಂಗ್ ಕಾಂಗ್ನಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 845ಕ್ಕೆ ಏರಿದ್ದು,  ನಾಲ್ಕು ರೋಗಿಗಳು ಸಾವನ್ನಪ್ಪಿದ್ದಾರೆ.  ಇನ್ನು, 173 ಮಂದಿ ಆಸ್ಪತ್ರೆಗಳಿಂದ ನಿರ್ಗಮಿಸಿದ್ದಾರೆ. ಮತ್ತೊಂದು ಸ್ವಾಯತ್ತ ಪ್ರಾಂತ್ಯವಾದ ಮಕಾವೊದಲ್ಲಿ 43 ಜನರು ಈ ಕಾಯಿಲೆಯ ಸೋಂಕಿಗೆ ಒಳಗಾಗಿದ್ದು ಈ ಪೈಕಿ ಗುಣಮುಖರಾದ 10 ಮಂದಿಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿಲಾಗಿದೆ.  ಚೀನಾ ಭಾಗವಾದ ತೈವಾನ್ನಲ್ಲಿ ಸೋಂಕಿತರ ಸಂಖ್ಯೆ 348 ಕ್ಕೇರಿದ್ದು, ಐದು ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿನಿಂದ  50 ಮಂದಿ ಚೇತರಿಸಿಕೊಂಡಿದ್ದಾರೆ. ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೊರೊನಸೋಂಕನ್ನು ವಿಶ್ವವ್ಯಾಪಿ ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು. ಮಾರಕ ರೋಗದಿಂದ ವಿಶ್ವದಾದ್ಯಂತ ಇದುವರೆ ಸುಮಾರು 11 ಲಕ್ಷ ಜನರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದು, 59,000 ಕ್ಕೂ ಹೆಚ್ಚು ಸಾವು ಸಂಭವಿಸಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.