ಚೆಂಗ್ಡು,
ಮಾರ್ಚ್ 31,ನೈಋತ್ಯ ಚೀನಾದ ಸಿಚುಯಾನ್ ಪ್ರಾಂತ್ಯದಲ್ಲಿ ಹಬ್ಬಿದ್ದ ಕಾಡ್ಗಿಚ್ಚು
ನಂದಿಸುವ ವೇಳೆ 19 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪ್ರಾಧಿಕಾರ ಮಂಗಳವಾರ
ತಿಳಿಸಿದೆ. 18 ಅಗ್ನಿಶಾಮಕ ಸಿಬ್ಬಂದಿ ಮತ್ತು ಓರ್ವ ಸ್ಥಳೀಯ ಅರಣ್ಯ ಕೃಷಿ ಕಾರ್ಮಿಕ
ಮೃತಪಟ್ಟಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿಗೆ ಅರಣ್ಯ ಕೃಷಿ ಕಾರ್ಮಿಕ ದಾರಿ
ತೋರಿಸಿಕೊಡಲು ತೆರಳಿದ್ದ ಎಂದು ವರದಿಯಾಗಿದೆ.ಮಂಗಳವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ
ದಿಢೀರ್ ಗಾಳಿಯ ದಿಕ್ಕು ಬದಲಾದ ಕಾರಣ ಅವರೆಲ್ಲರೂ ಕಾಡ್ಗಿಚ್ಚಿನ ಮಧ್ಯೆ
ಸಿಲುಕಿದ್ದಾರೆ.ಸೋಮವಾರ ಮಧ್ಯಾಹ್ನ 3.51 ರ ಸುಮಾರಿಗೆ ಸ್ಥಳೀಯ ಅರಣ್ಯ ಪ್ರದೇಶದಲ್ಲಿ
ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಸಮೀಪದ ಪರ್ವತಗಳಿಂದ ದಿಢೀರ್ ಪ್ರಬಲ ಗಾಳಿ ಬೀಸಿದ ಕಾರಣ
ಬೆಂಕಿ ವೇಗವಾಗಿ ಹಬ್ಬಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.ಸುಮಾರು 300 ವೃತ್ತಿಪರ
ಅಗ್ನಿಶಾಮಕ ಸಿಬ್ಬಂದಿ ಮತ್ತು 700 ಯೋಧರನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು.