ತಾಲ್ಲೂಕುನ್, ಅಫ್ಘಾನಿಸ್ತಾನ, ಆ 21 ಉತ್ತರ ತಖಾರ್ ಪ್ರಾಂತ್ಯದಲ್ಲಿ ತಾಲಿಬಾನ್ ಭಾಗಗಳನ್ನು ಗುರಿಯಾಗಿಸಿ ಅಫ್ಘಾನಿಸ್ತಾನ ಸೇನೆ ನಡೆಸಿದ ವಾಯುದಾಳಿಯಲ್ಲಿ 18 ಉಗ್ರರು ಹತರಾಗಿದ್ದಾರೆ ಎಂದು ಸದರಿ ಪ್ರಾಂತ್ಯದ ಗವರ್ನರ್ ಅವರ ವಕ್ತಾರ ಮೊಹಮ್ಮದ ಜಾವೆದ್ ಹಜಾರಿ ಬುಧವಾರ ಮಾಹಿತಿ ನೀಡಿದ್ದಾರೆ ಮಂಗಳವಾರ ತಡರಾತ್ರಿ ಕೈಗೊಂಡ ಕಾರ್ಯಾಚರಣೆಯಲ್ಲಿ 10ಕ್ಕೂ ಹೆಚ್ಚು ದಂಗೆಕೋರರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ ತಾಲಿಬಾನ್ ಭಯೋತ್ಪಾದಕರ ಅಡಗುದಾಣಗಳನ್ನು ಗುರಿಯಾಗಿ ಸೇನಾಪಡೆ ವಾಯುದಾಳಿ ಮುಂದುವರಿಸಿದೆ ಎಶ್ಕಾಮಿಶ್ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿದ್ದ ಉಗ್ರರನ್ನು ಭದ್ರತಾ ಪಡೆಯ ಯೋಧರು ಹೊರಹಾಕಿದ್ದಾರೆ ಎಂದು ಜಾವೆದ್ ಹಜಾರಿ ತಿಳಿಸಿದ್ದಾರೆ ಈ ದಾಳಿ ಹಾಗೂ ಸಾವು ನೋವಿನ ಕುರಿತು ತಾಲಿಬಾನ್ ಸಂಘಟನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ