ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವ ವಿದ್ಯಾನಿಲಯದಿಂದ ನೆರೆ ಪೀಡಿತರಿಗೆ 18 ಲಕ್ಷರೂ ಮೌಲ್ಯದ ಪಾತ್ರೆ, ಬಟ್ಟೆ ವಿತರಣೆ

ಧಾರವಾಡ 28: ಮಳೆಯಿಂದ ತೊಂದರೆಗೊಳಗಾದ ಜನರಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧಮರ್ಾಧಿಕಾರಿ ಡಾ.ವಿರೇಂದ್ರ ಹೆಗಡೆ ಅವರ ಆಶೀವರ್ಾದ ಮತ್ತು ಮಾರ್ಗದರ್ಶನದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವ ವಿದ್ಯಾನಿಲಯದ ವತಿಯಿಂದ ಉಪಕುಲಪತಿ ಡಾ.ನಿರಂಜನಕುಮಾರ ಅವರ ಸಾರಥ್ಯದಲ್ಲಿ ಪ್ರಾದೇಶಿಕ ನಿದರ್ೇಶಕ ದುಗ್ಗೇಗೌಡರವರ ಸಲಹೆ ಪಡೆದು 18 ಲಕ್ಷರೂ ಮೌಲ್ಯದ 500 ಕುಟುಂಬಕ್ಕೆ ಅಡುಗೆ ಪಾತ್ರೆ 500 ಕುಟುಂಬಗಳಿಗೆ ಬಟ್ಟೆ ಬರೆಗಳನ್ನು ವಿತರಿಸಲಾಯಿತು. 

ಮಳೆ ನೀರು ನುಗ್ಗಿ ಸಂಕಷ್ಟಕ್ಕೊಳಗಾಗಿದ್ದ ಧಾರವಾಡ ಜಿಲ್ಲೆಯ ನಿವಾಸಿಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿದರ್ೇಶಕ ಸುರೇಶ ಎಂ ಅವರು ಕಿಟ್ಗಳನ್ನು ವಿತರಿಸಿ, ಇತ್ತೀಚಿನ ಅತಿವೃಷ್ಠಿ ಮತ್ತು ನೆರೆಯಿಂದ ಅನೇಕ ಗ್ರಾಮಗಳು ಜಲಾವೃತಗೊಂಡಿವೆ. ಸಾವಿರಾರು ಕುಟುಂಬಗಳ ಜನರು ಮನೆ, ಆಸ್ತಿ ಕಳೆದುಕೊಂಡು ನಿರ್ಗತಿಕರಾದದ್ದು ದುಖಃದ ಸಂಗತಿ. ಪ್ರಕೃತಿಯ ಈ ಅವಾಂತರಕ್ಕೆ ದೇವರಲ್ಲಿ ಪ್ರಾರ್ಥನೆ ಮಾಡದೇ ಬೇರೆದಾರಿಯಿಲ್ಲದಂತಾಗಿದೆ.

ಈ ಸಂದರ್ಭದಲ್ಲಿ ತೀವ್ರತೊಂದರೆಯಲ್ಲಿರುವ ಜನರಿಗೆ ನೆರವು ನೀಡಲು ಬಯಸಿ ಧಮರ್ಾಧಿಕಾರಿ ಡಾ.ವಿರೇಂದ್ರ ಹೆಗಡೆ ಅವರ ಮಾರ್ಗದರ್ಶನದಲ್ಲಿ ಜೀವನವಶ್ಯಕತೆಯ ವಸ್ತುಗಳನ್ನು ವಿತರಿಸಲಾಗುತ್ತಿದೆ. ಈಗಾಗಲೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸರಕಾರದ ನೆರೆ ಪರಿಹಾರ ನಿಧಿಗೆ 25 ಕೋಟಿ ರೂ. ನೀಡಿರುತ್ತಾರೆ. ಈ ಮೂಲಕ ರಾಜ್ಯದ ನೆರೆ ಪೀಡಿತ ಗ್ರಾಮದ ಜನರಿಗೆ ಸಾಂತ್ವನ ಹೇಳಲಾಗುತ್ತಿದೆ ಎಂದರು.

ಗ್ರಾಮ ಪಂಚಾಯತ ಸದಸ್ಯರುಗಳು ಧಾರವಾಡ ಯೋಜನಾಧಿಕಾರಿ ಉಲ್ಲಾಸ್ ಮೇಸ್ತ, ಯೋಜನಾಧಿಕಾರಿ ಮಾಧವಗೌಡ, ಓಮು ಮರಾಠೆ, ಮೇಲ್ವಿಚಾರಕ ಹರೀಶ ಶೆಟ್ಟಿ, ಕೃಷಿ ಮೇಲ್ವಿಚಾರಕ ತನ್ವೀರ ಹುಸೇನ, ಸೇವಾಪ್ರತಿನಿಧಿಗಳು, ಒಕ್ಕೂಟ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.