ಜರ್ಮನಿಯಲ್ಲಿ 24 ಗಂಟೆಗಳಲ್ಲಿ 1775 ಪ್ರಕರಣ ದಾಖಲು

ಬರ್ಲಿನ್, ಏ.20, ಜರ್ಮನಿಯಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ “ಕೋವಿಡ್-19” ಪ್ರಕರಣಗಳು 1775 ವರದಿಯಾಗಿದ್ದು, ಒಟ್ಟು ರೋಗಿಗಳ ಸಂಖ್ಯೆ 1,41,672 ಮುಟ್ಟಿದೆ. ಅಲ್ಲದೆ 110 ಜನ ಮಹಾಮಾರಿಗೆ ಜೀವನ ಕಳೆದುಕೊಂಡಿದ್ದಾರೆ. ಇದರಿಂದ ಸಾವಿನ ಸಂಖ್ಯೆ 4404ಕ್ಕೇ ಏರಿಕೆ ಆಗಿದೆ. ಹೊಸ ಅಂಕಿ ಅಂಶಗಳ ಪ್ರಕಾರ, ಸೋಂಕಿತರ ಸಂಖ್ಯೆಯಲ್ಲಿ ಭಾನುವಾರ ಕಡಿಮೆ ಆಗಿದೆ. ಶನಿವಾರದ 2,458 ಪ್ರಕರಣಗಳು ದಾಖಲಾಗಿತ್ತು. ಸತ್ತವರ ಸಂಖ್ಯೆ 184 ರಿಂದ 110 ಕ್ಕೆ ಇಳಿದಿದೆ.ಹೆಚ್ಚಿನ ಪ್ರಕರಣಗಳು ಬವೇರಿಯಾ (37,849), ನಾರ್ತ್ ರೈನ್-ವೆಸ್ಟ್‍ ಫೀಲಿಯಾ (28,971) ಮತ್ತು ಬಾಡೆನ್-ವುರ್ಟೆಂಬರ್ಗ್ (28,253) ನಲ್ಲಿ ವರದಿಯಾಗಿದೆ. ಬರ್ಲಿನ್‌ನಲ್ಲಿ 5,196 ಪ್ರಕರಣಗಳಿವೆ.ಕರೋನಾದಿಂದ ಚೇತರಿಸಿಕೊಳ್ಳುವ ಜನರ ಸಂಖ್ಯೆಯಲ್ಲಿ 3500 ಹೆಚ್ಚಳ ಕಂಡುಬಂದಿದ್ದು, ಈ ಸಂಖ್ಯೆ 91500 ಕ್ಕೆ ಏರಿದೆ.