ರೋಮ್, ಫೆ.28 : ಇಟಲಿಯಲ್ಲಿ ಒಟ್ಟು 650 ಕೊರೊನಾವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಗುರುವಾರ ಮಧ್ಯಾಹ್ನ ಅಧಿಕಾರಿಗಳು ಒದಗಿಸಿದ ಹಿಂದಿನ ಎಣಿಕೆಗೆ ಹೋಲಿಸಿದರೆ 122 ಪ್ರಕರಣಗಳು ಹೆಚ್ಚಾಗಿದೆ.
ಉತ್ತರ ಲೊಂಬಾರ್ಡಿ ಪ್ರದೇಶದಲ್ಲಿ ಇನ್ನೂ ಮೂರು ಜನರು ಸಾವನ್ನಪ್ಪಿದ್ದು, ಸೋಂಕಿನಿಂದ ಸಾವನ್ನಪ್ಪಿದ ಪ್ರಕರಣ 17ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದ್ದು, ಲೊಂಬಾರ್ಡಿಯಲ್ಲಿ ಇನ್ನೂ 40 ಜನಚೇತರಿಸಿಕೊಂಡಿದ್ದಾರೆ. ಈಗಾಗಲೇ ಸಿಸಿಲಿಯಲ್ಲಿ ಇಬ್ಬರು ಮತ್ತು ಲಾಜಿಯೊದಲ್ಲಿ (ರೋಮ್ ಸುತ್ತಲೂ) ಮೂರು ಜನರು, ಸೇರಿದಂತೆ ಒಟ್ಟು 45 ಜನರನ್ನು ಗುಣಪಡಿಸಿರುವುದಾಗಿ ಬೊರೆಲ್ಲಿ ಸ್ಪಷ್ಟಪಡಿಸಿದ್ದಾರೆ.
ಇಟಾಲಿಯನ್ ಅಧಿಕಾರಿಗಳು ಗುರುವಾರ ಅಲ್ಲಿನ ಪರಿಸ್ಥಿತಿ ಮತ್ತು ದೈನಂದಿನ ಮಾಹಿತಿಯ ಸಂಪೂರ್ಣ ವಿವರವನ್ನು ಪಾರದರ್ಶಕವಾಗಿ ವಿವರಿಸಿದ್ದಾರೆ.
ಬೊರೆಲ್ಲಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಲುಯಿಗಿ ಡಿ ಮಾಯೊ ಇಬ್ಬರೂ ಸೋಂಕಿನ ಕುರಿತು ಭಯಭೀತರಾಗುವ ಅಗತ್ಯವಿಲ್ಲ ಹಾಗಾ ದೇಶಕ್ಕೆ ಭೇಟಿಯನ್ನು ನಿರ್ಬಂಧ ಸೂಚಿಸುವ ಅಗತ್ಯವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.