ಗುಜರಾತ್ ನ ಮೃಗಾಲಯದಲ್ಲಿ 8 ದಿನಗಳಲ್ಲಿ 17 ಸಿಂಹದ ಮರಿಗಳ ಜನನ

ಜುನಾಗರ್, ಏ 8, ಗುಜರಾತ್ ನ ಪುರಾತನ ಮೃಗಾಲಯದಲ್ಲಿ ಎರಡು ಹೆಣ್ಣು ಸಿಂಹಗಳು ಬುಧವಾರ ಒಟ್ಟು ಎಂಟು  ಮರಿಗಳಿಗೆ ಜನ್ಮ ನೀಡಿವೆ. ಇದರಿಂದ ಕಳೆದ 8 ದಿನಗಳಲ್ಲಿ 17 ಸಿಂಹದ ಮರಿಗಲು ಜನಿಸಿವೆ. ಏ. 6ರಂದು ಸಕ್ಕರ್ ಬಾಗ್ ಮೃಗಾಯಲದಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿತ್ತು. ನಂತರ ಏಪ್ರಿಲ್ 1ರಂದು ಅದೇ ಮೃಗಾಲಯದ ಸಿಂಹಕ್ಕೆ ಮೂರು ಮರಿಗಳು ಜನಿಸಿದ್ದವು. ಇದರಿಂದ ಕಳೆದ ಎಂಟು ದಿನಗಳಲ್ಲಿ ಮೂರು ಸಿಂಹಗಳಿಗೆ 14 ಮರಿಗಳು ಜನಿಸಿದಂತಾಗಿದೆ. ಏ.16ರಂದು ಅಂಬಾರ್ಡಿ ಸಫಾರಿ ಉದ್ಯಾನವನದಲ್ಲಿ ಮೂರು ಸಿಂಹದ ಮರಿಗಳು ಜನಿಸಿವೆ. ಈ ಹಿಂದೆ ಅಂಬಾರ್ಡಿಯಲ್ಲಿ ಸಿಂಹವನ್ನು ತನ್ನದೇ ಮರಿಗಳನ್ನು ಹತ್ಯೆ ಮಾಡಿದ್ದ ಹಿನ್ನೆಲೆಯಲ್ಲಿ ಈ ಬಾರಿ ಮರಿಗಳನ್ನು ತಾಯಿಯಿಂದ ಬೇರ್ಪಡಿಸಿ ಸಕ್ಕರ್ ಬಾಗ್ ಮೃಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸಿಸಿಎಫ್ ಡಿ.ಟಿ. ವಾಸುದೇವ ಯುಎನ್ಐ ಗೆ ತಿಳಿಸಿದ್ದಾರೆ.