ಪ್ರವಾಸಿ ತಾಣ, ಬೀಚ್ ಗಳ ಲೈಫ್ ಗಾರ್ಡ್ಸಗೆ 17.55 ಲಕ್ಷದ ರಕ್ಷಣ ಸಾಮಾಗ್ರಿ ವಿತರಣೆ: ಸಚಿವರು, ಜಿಲ್ಲಾಧಿಕಾರಿ
17.55 lakhs worth of protective equipment distributed to lifeguards at tourist destinations and beac
ಕಾರವಾರ 22: ಜಿಲ್ಲೆಯ ಪ್ರಮುಖ ಬೀಚ್ ಗಳು ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ರಕ್ಷಣೆಗೆ ಸಜ್ಜಾಗಿರುವ 35 ಜನ ಲೈಫ್ ಗಾರ್ಡ್ಸ್ ಗಳಿಗೆ ರಕ್ಷಣಾ ಸಾಮಾಗ್ರಿಗಳನ್ನು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ವಿತರಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾಮಾಗ್ರಿ ವಿತರಿಸಿ ಮಾತನಾಡಿದ ಅವರು ಕಾರವಾರ ರವೀಂದ್ರನಾಥ ಠಾಗೋರ್ ಬೀಚ್ ಗೋಕರ್ಣ, ಮುರುಡೇಶ್ವರ ಬೀಚ್ ಗಳಲ್ಲಿ ಪ್ರವಾಸಿಗರು ಅಪಾಯಕ್ಕೆ ಸಿಲುಕಿದರೆ ಅವರ ರಕ್ಷಣೆಗೆ ಲೈಫ್ ಗಾರ್ಡ್ಸ್ ಸದಾ ಸಿದ್ಧರಾಗಿರುತ್ತಾರೆ ಎಂದರು . ಟಾಗೋರ್, ಮುರುಡೇಶ್ವರ, ಗೋಕರ್ಣ ಬೀಚ್ ಗಳ ಪ್ರವಾಸಿಗರ ರಕ್ಷಣೆಗೆ ಲೈಫ್ ಗಾರ್ಡ್ಸಗೆ ಬೇಕಾದ ತಲಾ ಒಂದೊಂದು ರೆಸ್ಕೂ ಬೋರ್ಡ, ತಲಾ 20 ವಾಟರ್ ಟೂಬ್ಸ, ನೂರಾರು ಮೀಟರ್ ರೂಫ್ ನೈಲಾನ್ ಹಗ್ಗ, 60 ತೇಲುವ ಬೊಯ್ ಗಳನ್ನು ಅವರಿಗೆ ವಿತರಿಸಲಾಗಿದೆ. ಅಲ್ಲದೆ 35 ಲೈಫ್ ಗಾರ್ಡ್ಸ್ ಗಳಿಗೆ ಡ್ರೆಸ್ , ಕೈವಚ ಬಟ್ಟೆ, ಲೈಫ್ ಜಾಕೆಟ್ಸ್ ವಿತರಿಸಲಾಗಿದೆ. ಎಲ್ಲಾ ಬೀಚ್ ಗಳಲ್ಲಿನ ಅವಶ್ಯಕತೆ ನೋಡಿ ರಕ್ಷಣಾ ಸಾಮಾಗ್ರಿ ವಿತರಿಸಲಾಗಿದೆ ಎಂದ ಸಚಿವ ವೈದ್ಯರು, ನಿರ್ಮಿತಿ ಕೇಂದ್ರದ ಮೂಲಕ ಸಾಮಾಗ್ರಿ ತರಿಸಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ರಕ್ಷಣಾ ಸಾಮಗ್ರಿ ವಿತರಿಸಲಾಗಿದೆ ಎಂದರು .
ನಂತರ ರಕ್ಷಣಾ ಸಾಮಾಗ್ರಿ ಸಲಕರಣೆಗಳನ್ನು ಕುಮಟಾ, ಹೊನ್ನಳ್ಳಿ, ಕುಡ್ಲೆ, ಓಂ ಬೀಚ್ , ವಿಭೂತಿ ಫಾಲ್ಸ ನಂತಹ ಅಪಾಯಕಾರಿ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ , ಸಂಸದ ಕಾಗೇರಿ,ಶಾಸಕ ಸೈಲ್ , ಕಡೆಯಿಂದ ವಿತರಿಸಲಾಯಿತು . ಪ್ರವಾಸೋದ್ಯಮ ಪ್ರಭಾರ ಉಪ ನಿರ್ದೇಶಕ ಮಂಜುನಾಥ ನಾವಿ, ಟೂರಿಜಂ ಇಲಾಖೆಯ ಸಿಬ್ಬಂದಿ ರವಿ, ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 