ಪದ್ಮವಿಭೂಷನ ಡಾ.ಪುಟ್ಟರಾಜ ಗವಾಯಿಗಳವರ 15ನೇ ಪುಣ್ಮಸ್ಮರಣೆ ಹಾಗೂ ಸಂಗೀತೋತ್ಸವ
15th Memorial Day and Music Festival of Padma Vibhushan Dr. Puttaraja Gawaigal
ಪದ್ಮವಿಭೂಷನ ಡಾ.ಪುಟ್ಟರಾಜ ಗವಾಯಿಗಳವರ 15ನೇ ಪುಣ್ಮಸ್ಮರಣೆ ಹಾಗೂ ಸಂಗೀತೋತ್ಸವ
ಧಾರವಾಡ 14: ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನ(ರಿ) ಧಾರವಾಡವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದೊಂದಿಗೆ ಪದ್ಮವಿಭೂಷಣ ಡಾ.ಪುಟ್ಟರಾಜ ಗವಾಯಿಗಳ 15ನೇ ಪುಣ್ಯಸ್ಮರಣೆ ಹಾಗೂ ಸಂಗೀತೋತ್ಸವವನ್ನು ದಿ.17 ರಂದು ಸಂಜೆ 5.30 ಗಂಟೆಗೆ ಕವಿವ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಆಯೋಜನೆ ಮಾಡಿದೆ.
ಧಾರವಾಡ ಶ್ರೀಮುರುಘಾಮಠದ ಪೂಜ್ಯ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಖ್ಯಾತ ಎಲುವು ಮತ್ತು ಮೂಳೆ ತಜ್ಞರಾದ ಡಾ. ದೀಲೀಪ ದೇಶಪಾಂಡೆ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಅಧ್ಯಕ್ಷರಾದ ಮಹಾಬಲೇಶ್ವರ ಹಾಸಿನಾಳ ಅಧ್ಯಕ್ಷತೆ ವಹಿಸವರು.
ನಂತರ ಪುಣೆಯ ವಿರಾಜ್ ಜೋಶಿ ಅವರ ಗಾಯನಕ್ಕೆ ತಬಲಾದಲ್ಲಿ ಪುಣೆಯ ಪಾಂಡುರಂಗ ಪವಾರ ಹಾಗೂ ಹಾರ್ಮೊನಿಯಂದಲ್ಲಿ ಸತೀಶ್ ಭಟ್ ಹೆಗ್ಗಾರ ಸಾಥ್ ಸಂಗತ ನೀಡಲಿದ್ದಾರೆ. ಗದಗಿನ ಡಾ.ನಾರಾಯಣ ಹಿರೇಕೊಳಚಿ ಅವರ ವಯೋಲಿನ್ ವಾದನಕ್ಕೆ ಶ್ರೀಧರ ಮಾಂಡ್ರೆ ತಬಲಾ ಸಾಥ್ ನೀಡಲಿದ್ದಾರೆ. ಪ್ರತಿಷ್ಠಾನದ ಉಪಾಧ್ಯಕ್ಷ ಶಂಕರ ಕುಂಬಿ, ಖಚಾಂಚಿ ಪಂ.ಡಿ.ಕುಮಾರದಾಸ್, ಕಾರ್ಯದರ್ಶಿ ಪದ್ಮಶ್ರೀ ಪಂ. ಎಮ್.ವೆಂಕಟೇಶಕುಮಾರ ಉಪಸ್ಥಿತರಿರುವರು ಎಂದು ಪ್ರತಿಷ್ಠಾನವು ಪ್ರಕಟಣೆಯಲ್ಲಿ ತಿಳಿಸಿದೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 