ಕ್ಯಾಂಪಸ್ ಸಂದರ್ಶನದಲ್ಲಿ 156 ಜನರು ಅಪ್ರೆಂಟಿಸ್ ತರಬೇತಿಗೆ ಆಯ್ಕೆಯಾಗಿದ್ದಾರೆ.

156 people have been selected for apprenticeship training in the campus interview.

ವಿಜಯಪುರ 14: ನಗರದ ಬಿ.ಎಲ್‌.ಡಿ.ಇ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ 156 ಜನರು ಅಪ್ರೆಂಟಿಸ್ ತರಬೇತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಕಿರ್ಲೋಸ್ಕರ್ ಟೊಯೊಟಾ ಟೆಕ್ಸಟೈಲ್ಸ್‌ ಮಷಿನರಿ ಪ್ರೈ. ಲಿ. (ಕೆಟಿಟಿಎಂ) ನವರು ಈ ಕ್ಯಾಂಪಸ್ ಸಂದರ್ಶನ ನಡೆಸಿದ್ದರು. ವಿಜಯಪುರ ಜಿಲ್ಲೆಯ ನಾನಾ ಐಟಿಐ ಕಾಲೇಜುಗಳಿಂದ ಸುಮಾರು 172 ಅಭ್ಯರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಕೆಟಿಟಿಎಂ ಕಂಪನಿಯ ಎಚ್‌. ಆರ್‌. ವಿಭಾಗದ ಮುಖ್ಯಸ್ಥ ಮನೋಜಕುಮಾರ ಮತ್ತು ಸುಮಂತ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಮೌಖಿಕ ಸಂದರ್ಶನ ನಡೆಸಿದರು.  ಬಿ.ಎಲ್‌.ಡಿ.ಇ ಐಟಿಐ ಕಾಲೇಜಿನಿಂದ 60 ಜನ ತರಬೇತಿದಾರರು ಕಂಪೆನಿಯ ಅಪ್ರೆಂಟಿಸ್ ತರಬೇಕಿಗೆ  ಆಯ್ಕೆಗೊಂಡಿದ್ದಾರೆ.   

 ಒಂದು ವರ್ಷದ ಈ ಅವಧಿಯಲ್ಲಿ ಅಭ್ಯರ್ಥಿಗಳು ತರಬೇತಿಯ ಜೊತೆಗೆ ಸುಮಾರು ರೂ. 18,000 ರಿಂದ ರೂ. 22,000 ಸ್ಟೈಫಂಡ್ ಪಡೆಯಲಿದ್ದಾರೆ.  ಅಲ್ಲದೇ, ಅಪ್ರೆಂಟಿಸ್ ಬಳಿಕ ಅದೇ ಕಂಪನಿಯಲ್ಲಿ ವಚಿುುಂದುವರೆಯುವ ನೀರೀಕ್ಷೆ ಇದೆ. ಅಪ್ರೆಂಟಿಸ್ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಬಿ.ಎಲ್‌.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಸಂತಸ ವ್ಯಕ್ತಪಡಿಸಿದ್ದು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಎಂ. ಡಿ. ಪಡಸಲಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಧನ್ಯವಾದಗಳು. ಕಠಠ ಅಚಿಠಿಣಠ:ಃಐಆಇಂ ಋಋ ಅಚಿಟಠಿ ಖಜಟಜಛಿಣಠ:  ವಿಜಯಪುರ ನಗರದ ಬಿ.ಎಲ್‌.ಡಿ.ಇ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ 156 ಜನರು ಅಪ್ರೆಂಟಿಸ್ ತರಬೇತಿಗೆ ಆಯ್ಕೆಯಾಗಿದ್ದಾರೆ.  ಬೆಂಗಳೂರಿನ ಕಿರ್ಲೋಸ್ಕರ್ ಟೊಯೊಟಾ ಟೆಕ್ಸಟೈಲ್ಸ್‌ ಮಷಿನರಿ ಪ್ರೈ. ಲಿ. (ಕೆಟಿಟಿಎಂ) ನವರು ನಡೆಸಿದ ಕ್ಯಾಂಪಸ್ ಸಂದರ್ಶನದ ಬಳಿಕ ಆಯ್ಜೆಯಾದ ಅಭ್ಯರ್ಥಿಗಳೊಂದಿಗೆ ಕಂಪನಿಯ ಅಧಿಕಾರಿಗಳಾದ ಮನೋಜಕುಮಾರ, ಸುಮಂತ ಕಾಲೇಜಿನ ಪ್ರಾಚಾರ್ಯ ಎಂ. ಡಿ. ಪಡಸಲಗಿ ಅವರು ಗ್ರುಪ್ ಫೋಟೀ ತೆಗೆಸಿಕೊಂಡರು.