15 ವರ್ಷಗಳ ನೌಕಾಪಡೆ ಸೇವೆ: ಕರವೀರ ಮಹಾದೇವ ಶೇಗಾಂವಿ ಅವರಿಗೆ ಅದ್ಧೂರಿ ಸನ್ಮಾನ
15 Years of Naval Service: Grand Felicitation for Karaveera Mahadeva Shegavi
ಅಥಣಿ 09 : ಭಾರತೀಯ ನೌಕಾಪಡೆಯಲ್ಲಿ 15 ವರ್ಷಗಳ ಕಾಲ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕರವೀರ ಮಹಾದೇವ ಶೇಗಾಂವಿ ಅವರು ಸೆ.10ರಂದು ತಮ್ಮ ಸ್ವಗ್ರಾಮಕ್ಕೆ ಮರಳುತ್ತಿರುವ ಹಿನ್ನೆಲೆಯಲ್ಲಿ ಅದ್ಧೂರಿ ಸ್ವಾಗತ ಹಾಗೂ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ಅಥಣಿ ತಾಲೂಕು ವಕೀಲರ ಸಂಘದ ಮಾಧ್ಯಮ ವಕ್ತಾರ ನ್ಯಾಯವಾದಿ ಎಸ್.ಎಸ್. ಪಾಟೀಲ ತಿಳಿಸಿದ್ದಾರೆ. ಸೆ.10ರಂದು ಬೆಳಗ್ಗೆ 10 ಗಂಟೆಗೆ ವಿವಿಧ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಥಣಿ ವಕೀಲರ ಸಂಘದ ಸದಸ್ಯ ಎಂ.ಕೆ. ಶೇಗಾಂವಿ ಅವರ ಪುತ್ರರಾದ ಕರವೀರ ಮಹಾದೇವ ಶೇಗಾಂವಿ ಅವರು 12ನೇ ತರಗತಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ 2011ರ ಆಗಸ್ಟ್ 4ರಂದು ಭಾರತೀಯ ಸೇನೆ/ನೌಕಾಪಡೆಯಲ್ಲಿ ನೇಮಕಗೊಂಡು, 2026ರ ಆಗಸ್ಟ್ 30ರಂದು ನಿವೃತ್ತರಾಗಿದ್ದಾರೆ. ಸೇವಾವಧಿಯಲ್ಲಿ ಬಿಎಸ್ಸಿ, ಬಿಬಿಎ, ಎಲ್‌ಎಲ್ಬಿ ಹಾಗೂ ಎಂಎ ಇಂಗ್ಲಿಷ್ ಸೇರಿದಂತೆ ವಿವಿಧ ಶಿಕ್ಷಣ ಅರ್ಹತೆಗಳನ್ನು ಪಡೆದಿರುವ ಅವರು, ಸೇವೆಯ ಅವಧಿಯಲ್ಲಿ 22 ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ.
ಅವರ ಸೇವೆಯನ್ನು ಶ್ಲಾಘಿಸಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಮಕನಮರಡಿ ಗುರುದೇವ ಆಶ್ರಮದ ಪರಮಪೂಜ್ಯ ಗುರುಪಾದೇಶ್ವರ ಮಹಾಸ್ವಾಮೀಜಿ ಅವರ ದಿವ್ಯ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪರಮಪೂಜ್ಯ ಬಾಬುರಾವ್ ಮಹಾರಾಜ್ ಹೊನವಾಡ್ ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ಎ.ಎ. ಹುಡ್ಡರ್ ಅಧ್ಯಕ್ಷತೆ ವಹಿಸಲಿದ್ದು, ಆರ್.ಎನ್. ಸಿದ್ಧಾಂತಿ, ಕೆ.ಎಲ್. ಕುಂದರಗಿ, ಅಪ್ಪಾಸಾಹೇಬ ಅಲಿಬಾದಿ, ಪಿ.ಜಿ. ಬಿಸ್ಕುಪಿ, ಪಿ.ಎಸ್. ಕುಳೇಓಳಿ, ಎಂ.ಎಸ್. ಧೋಂಡಿ, ಶಿವು ಗುಡಾಪುರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು. ಕರವೀರ ಮಹಾದೇವ ಶೇಗಾಂವಿ ಅವರನ್ನು ಬೆಳಗ್ಗೆ ಗ್ರಾಮದಲ್ಲಿ ಸ್ವಾಗತಿಸಿ, ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಗುವುದು. ಈ ಕಾರ್ಯಕ್ರಮಕ್ಕೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 