ಗದಗದಲ್ಲಿ ಮತ್ತೆ 15 ಕೋವಿಡ್ ಪಾಸಿಟಿವ್ ಪ್ರಕರಣ ದೃಢ
ಗದಗ, ಮೇ 23, ಗದಗ ಜಿಲ್ಲೆಗೆ ಗುಜರಾತದಿಂದ ಹಿಂದಿರುಗಿದ 15 ಮಂದಿಯಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
25 ವರ್ಷದ ಪುರುಷ ಪಿ-1744, 17 ವರ್ಷದ ಪುರುಷ ಪಿ-1745, ಮಹಾರಾಷ್ಟ್ರದಿಂದ ಹಿಂದುರಿಗಿದ 7 ವರ್ಷದ ಹೆಣ್ಣು ಮಗು ಪಿ-1746, 20 ವರ್ಷದ ಪುರುಷ ಪಿ-1747, 50ವರ್ಷದ ಮಹಿಳೆ ಪಿ-1748, ರಾಜಸ್ಥಾನ ದಿಂದ ಹಿಂದಿರುಗಿದ 17 ವರ್ಷದ ಹೆಣ್ಣುಮಗಳು ಪಿ-1763, ಪಿ-913 ಪ್ರಕರಣ ಸಂಪರ್ಕಿತ 15 ವರ್ಷದ ಗಂಡುಮಗ ಪಿ-1794, 17 ವರ್ಷದ ಗಂಡುಮಗ ಪಿ-1795, 50 ವರ್ಷದ ಮಹಿಳೆ ಪಿ-1932, 20 ವರ್ಷದ ಹೆಣ್ಣು ಮಗಳು ಪಿ-1933, 22 ವರ್ಷದ ಹೆಣ್ಣು ಮಗಳು ಪಿ-1934, 18 ವರ್ಷದ ಗಂಡುಮಗ ಪಿ-1935, 18 ವರ್ಷದ ಹೆಣ್ಣು ಮಗಳು ಪಿ-1936, 8 ವರ್ಷದ ಹೆಣ್ಣು ಮಗಳು ಪಿ-1937, 21 ವರ್ಷದ ಗಂಡುಮಗ ಪಿ-1938 ಒಟ್ಟು 15 ಕೋವಿಡ್-19 ಸೋಂಕು ಧೃಡಪಟ್ಟಿದ್ದು ಅವರೆಲ್ಲರಿಗೂ ನಿಗದಿತ ಕೊವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಸೋಂಕಿತರ ಪ್ರಯಾಣದ ವಿವರ:- ದಿ. 18ರಂದು ಗುಜರಾತದ ಅಹಮದಾಬಾದದಿಂದ ಎರಡು ವಾಹನಗಳ ಮೂಲಕ ಒಟ್ಟು 17ಜನ ಜಿಲ್ಲೆಗೆ ಆಗಮಿಸಿದ್ದು ಇದರಲ್ಲಿ ಪಿ-1744 ಹಾಗೂ ಪಿ-1745 ಇವರು ಎರಡು ಕೋವಿಡ್-19 ಸೋಂಕು ಧೃಡಪಟ್ಟಿದೆ. ಪ್ರಾಥಮಿಕ ಸಂಪರ್ಕಿತ ಉಳಿದ 15 ಜನರನ್ನು ನಿಗಾದಲ್ಲಿರಿಸಲಾಗಿದೆ. ಮಹಾರಾಷ್ಟ್ರದಿಂದ ನಿಪ್ಪಾಣಿ ವರೆಗೆ ಬಾಡಿಗೆ ವಾಹನದ ಮೂಲಕ ಬಂದು ನಿಪ್ಪಾಣಿಯಿಂದ ಗದಗ ವರೆಗೆ ಲಾರಿ ಮೂಲಕ ಜಿಲ್ಲೆಗೆ ಆಗಮಿಸಿದ್ದ 4 ಜನರಲ್ಲಿ ಪಿ-1746, ಪಿ-1747, ಪಿ-1748 ಮೂರ ಜನರಿಗೆ ಸೋಂಕು ದೃಡಪಟ್ಟಿದ್ದು ಪ್ರಾಥಮಿಕ ಸಂಪರ್ಕಿತ ಒಬ್ಬರನ್ನು ನಿಗಾದಲ್ಲಿರಿಸಲಾಗಿದೆ.
ಮೇ 18 ರಂದು ರಾಜಸ್ಥಾನದ ಅಜ್ಮೀರ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿದ ಲಕ್ಷ್ಮೇಶ್ವರ ತಾಲೂಕಿನ 4 ಕುಟುಂಬದ ಒಟ್ಟು 17 ಜನರಲ್ಲಿ ಪಿ-1763ಗೆ ಸೋಂಕು ಧೃಡಪಟ್ಟಿದ್ದು ಪ್ರಾಥಮಿಕ ಸಂಪರ್ಕಿತ 16, ದ್ವೀತಿಯ ಸಂಪರ್ಕಿತ 5 ಜನರನ್ನು ನಿಗಾದಲ್ಲಿರಿಸಲಾಗಿದೆ. ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಗಂಜಿ ಬಸವೇಶ್ವರ ವೃತ್ತದ ನಿರ್ಬಂಧಿತ ಪ್ರದೇಶದಲ್ಲಿ ಸೋಂಕು ಧೃಡಪಟ್ಟ ಪಿ-1933 ಸಂಪರ್ಕಿತ ಪಿ-1794, ಪಿ-1795, ಪಿ-1932, ಪಿ-1933, ಪಿ-1934, ಪಿ-1935, ಪಿ-1936, ಪಿ-1937, ಪಿ-1938 ಗೆ ಸೋಂಕು ಧೃಡಪಟ್ಟಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 