ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ 14th Convocation of Rani Channamma University

ಬೆಳಗಾವಿ 24: ಗೌರವಾನ್ವಿತ ರಾಜ್ಯಪಾಲರು ಹಾಗೂ ಕುಲಾಧಿಪತಿಗಳ ನಿರ್ದೇಶನದಂತೆ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವವು ದಿನಾಂಕ: 25-11-2025 ರಂದು ಮುಂಜಾನೆ 11:30 ಕ್ಕೆ ಸುವರ್ಣ ವಿಧಾನಸೌಧ, ಬೆಳಗಾವಿಯಲ್ಲಿ ನಡೆಯಲಿದೆ. ಈ ಕುರಿತು ವಿವರಗಳನ್ನು ನೀಡಲು ಈ ಪತ್ರಿಕಾ ಗೋಷ್ಠಿಯನ್ನು ಕರೆಯಲಾಗಿದೆ.  ನಿಮ್ಮೆಲ್ಲರ ಸಹಕಾರದೊಂದಿಗೆ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಯಶಸ್ವಿಯಾಗಿ 15 ವರ್ಷಗಳನ್ನು ಪೂರೈಸಿದೆ.   

ಕೇವಲ ಒಂದೂವರೆ ದಶಕದಲ್ಲಿ ವಿಶ್ವವಿದ್ಯಾಲಯವು ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದ್ದು, ಈ ಕೆಳಗಿನವು ಗಮನಾರ್ಹವಾಗಿವೆ:   

2024ರಲ್ಲಿ ರಾಷ್ಟ್ರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಉಚ್ಚತರ ಶಿಕ್ಷಣ ಅಭಿಯಾನ(PM-USHA(MERU))ಯೋಜನೆಯಡಿಯಲ್ಲಿ ಸಂಶೋಧನೆ, ಪ್ರಯೋಗಾಲಯಗಳು ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ರೂ. 100 ಕೋಟಿ (60 ಕೋಟಿ ಕೇಂದ್ರ ಸರ್ಕಾರದಿಂದ ಹಾಗೂ 40 ಕೋಟಿ ರಾಜ್ಯ ಸರ್ಕಾರದಿಂದ) ಅನುದಾನ ಮಂಜೂರಾಗಿದೆ.  

ಇತ್ತೀಚೆಗೆ, ಪ್ರತಿಷ್ಠಿತ ಐಐಟಿ ಮುಂಬೈಯಿಂದ Geospatial Technology ವಿಷಯದಲ್ಲಿ ’ಎಮರ್ಜಿಂಗ್ ಯೂನಿವರ್ಸಿಟಿ ಅವಾರ್ಡ’(Emerging University Award) 

ಸಂಸ್ಥೆಯು ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ತನ್ನ ನ ಅಧಿಕೃತ ಪಾಲುದಾರರನ್ನಾಗಿ ಪರಿಗಣಿಸಿದೆ.  

ವಿಶ್ವವಿದ್ಯಾಲಯವು 2021ರಲ್ಲಿ ನ್ಯಾಕ್ (ಓಂಂಅ) ನಿಂದ ಮನ್ನಣೆ ಪಡೆದು, ಉನ್ನತ ಶ್ರೇಣಿಯನ್ನು ಗಳಿಸಿದೆ.  

ಇ-ಆಡಳಿತ ವ್ಯವಸ್ಥೆ ಜಾರಿಯಲ್ಲಿ ವಿಶ್ವವಿದ್ಯಾಲಯವು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ.  

ಸಂಯೋಜಿತ ಮಹಾವಿದ್ಯಾಲಯಗಳು (372) ಹಾಗೂ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ (1,39,000) ರಾಜ್ಯದಲ್ಲೇ ಅತಿ ದೊಡ್ಡ ವಿಶ್ವವಿದ್ಯಾಲಯ ಎಂದೆನಿಸಿದೆ.    

ಶೈಕ್ಷಣಿಕ ವಿವರಗಳು: ಸಂಯೋಜಿತ ಕಾಲೇಜುಗಳು: ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳ ಒಟ್ಟು 372 ಮಹಾವಿದ್ಯಾಲಯಗಳು. ವಿದ್ಯಾರ್ಥಿಗಳ ಸಂಖ್ಯೆ: ಸುಮಾರು 1.39 ಲಕ್ಷ (1,39,000) ಯುಜಿ, ಪಿಜಿ ಮತ್ತು ಪಿಎಚ್ಡಿ ವಿದ್ಯಾರ್ಥಿಗಳು. ಸ್ನಾತಕೋತ್ತರ ಕೇಂದ್ರಗಳು: ವಿಜಯಪುರದಲ್ಲಿ ಸ್ನಾತಕೋತ್ತರ ಕೇಂದ್ರ, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಮತ್ತು 42 ಕಾಲೇಜುಗಳಲ್ಲಿ ಸ್ನಾತಕೋತ್ತರ ಕೇಂದ್ರಗಳು. ಪ್ರಸ್ತುತ, 25 ಸ್ನಾತಕೋತ್ತರ ಕೋರ್ಸ್ಗಳಲ್ಲಿ ಸುಮಾರು 2,500 ವಿದ್ಯಾರ್ಥಿಗಳು ಉನ್ನತ ಅಧ್ಯಯನ ಮಾಡುತ್ತಿದ್ದಾರೆ.  

ಕೋರ್ಸ್ಗಳು: ಕಲೆ, ವಿಜ್ಞಾನ, ವಾಣಿಜ್ಯ ಮತ್ತು ಶಿಕ್ಷಣ ನಿಖಾಯಗಳ ಅಡಿಯಲ್ಲಿ ಸ್ನಾತಕ, ಸ್ನಾತಕೋತ್ತರ, ಪಿಎಚ್‌.ಡಿ., ಪಿಜಿ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳನ್ನು ನೀಡಲಾಗುತ್ತಿದೆ.  

ಅಧ್ಯಯನ ಪೀಠಗಳು: ಡಾ. ಬಿ. ಆರ್‌. ಅಂಬೇಡ್ಕರ್, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತು ಪಂಡಿತ್ ದೀನದಯಾಳ್ ಉಪಾಧ್ಯಾಯ ಅಧ್ಯಯನ ಪೀಠಗಳು ಸೇರಿದಂತೆ ಒಟ್ಟು 04 ಅಧ್ಯಯನ ಪೀಠಗಳು ಕಾರ್ಯನಿರ್ವಹಿಸುತ್ತಿವೆ. ಪಿಜಿ ಡಿಪ್ಲೋಮಾ: ಪ್ರಸ್ತುತ 4 ವಿಷಯಗಳಲ್ಲಿ ಪಿಜಿ ಡಿಪ್ಲೋಮಾ ಕೋರ್ಸ್ಗಳನ್ನು ನೀಡಲಾಗುತ್ತಿದೆ. ಸಂಶೋಧನೆ: 325 ಕ್ಕಿಂತ ಹೆಚ್ಚು ಸಂಶೋಧನಾರ್ಥಿಗಳಿಂದ ವಿವಿಧ ವಿಷಯಗಳಲ್ಲಿ ಸಂಶೋಧನೆ ನಡೆಯುತ್ತಿದೆ.  

ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಅನೇಕ ವಿನೂತನ ಜ್ಞಾನಮುಖಿ, ಉದ್ಯೋಗಮುಖಿ ಹಾಗೂ ಸಮಾಜಮುಖಿ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಮೂಲಕ ಶೈಕ್ಷಣಿಕವಾಗಿ ಮತ್ತು ಗುಣಾತ್ಮಕವಾಗಿ ಬೆಳೆಯುತ್ತಿದೆ. ಕರ್ನಾಟಕ ಸರ್ಕಾರವು ಈಗಾಗಲೇ ಹಿರೇಬಾಗೇವಾಡಿಯಲ್ಲಿ 126 ಎಕರೆ ಮತ್ತು 27 ಗುಂಟೆ ಜಮೀನನ್ನು ಮಂಜೂರು ಮಾಡಿದೆ. ಅಲ್ಲಿ ಆಡಳಿತ ಮತ್ತು ಶೈಕ್ಷಣಿಕ ಕಟ್ಟಡಗಳ ನಿರ್ಮಾಣ ಕಾರ್ಯವು ಮುಕ್ತಾಯದ ಹಂತದಲ್ಲಿದೆ ಎಂಬುದು ಸಂತೋಷದ ವಿಷಯವಾಗಿದೆ. ರಸ್ತೆ ಮತ್ತು ನೀರು ಸರಬರಾಜಿನಂತಹ ಮೂಲಭೂತ ಸೌಕರ್ಯಗಳ ಕಾಮಗಾರಿ ಪ್ರಸ್ತುತ ಪ್ರಗತಿಯಲ್ಲಿದೆ.  

ಘಟಿಕೋತ್ಸವದ ವಿವರಗಳು: ದಿನಾಂಕ ಮತ್ತು ಸಮಯ: 25-11-2025 ರಂದು ಮುಂಜಾನೆ 11:30 ಕ್ಕೆ. ಸ್ಥಳ: ಸುವರ್ಣ ವಿಧಾನಸೌಧ, ಬೆಳಗಾವಿ. ಅಧ್ಯಕ್ಷತೆ: ಸನ್ಮಾನ್ಯ ಶ್ರೀ ಥಾವರ್ಚಂದ್ ಗೆಹೋಟ್ (ಗೌರವಾನ್ವಿತ ರಾಜ್ಯಪಾಲರು ಹಾಗೂ ಕುಲಾಧಿಪತಿಗಳು). ಗೌರವ ಉಪಸ್ಥಿತಿ: ಡಾ. ಎಂ.ಸಿ. ಸುಧಾಕರ್ (ಉನ್ನತ ಶಿಕ್ಷಣ ಮಂತ್ರಿಗಳು ಹಾಗೂ ಸಮಕುಲಾಧಿಪತಿಗಳು). ಘಟಿಕೋತ್ಸವ ಭಾಷಣ: ಪದ್ಮಶ್ರೀ ಪುರಸ್ಕೃತ ಶ್ರೀ ಎ. ಎಸ್‌. ಕಿರಣ್ ಕುಮಾರ್ (ಮಾಜಿ ಅಧ್ಯಕ್ಷರು, ಇಸ್ರೋ ಹಾಗೂ ಜಿ. ಎಮ್‌. ಮೋದಿ ವಿಜ್ಞಾನ ಪ್ರಶಸ್ತಿ ಪುರಸ್ಕೃತರು).  

ಪ್ರಶಸ್ತಿಗಳು ಮತ್ತು ಪದವಿಗಳು:  

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 03 ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಗುತ್ತಿದೆ. ಒಟ್ಟು ಪದವಿ ಅರ್ಹ ಅಭ್ಯರ್ಥಿಗಳು: 38,485 ವಿದ್ಯಾರ್ಥಿಗಳು. (36,642 ಸ್ನಾತಕ ವಿದ್ಯಾರ್ಥಿಗಳು ಮತ್ತು 1,843 ಸ್ನಾತಕೋತ್ತರ ವಿದ್ಯಾರ್ಥಿಗಳು). ಖಚಿಟಿಞ ವಿಜೇತರು: 125 ವಿದ್ಯಾರ್ಥಿಗಳು. ಪ್ರಶಸ್ತಿಗಳು: ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ 39 ಚಿನ್ನದ ಪದಕಗಳು (11-ಪ್ರಾಯೋಜಕರಿಂದ, 28-ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ), 04 ವಿಷಯವಾರು ಅಗ್ರ ಶ್ರೇಯಾಂಕಿತರು (ಖಣಛರಿಜಛಿಣ ಖಿಠಠಿಜಢಿ) ಹಾಗೂ 01 ನಗದು ಬಹುಮಾನವನ್ನು (ಇಬ್ಬರು ವಿದ್ಯಾರ್ಥಿಗಳಿಗೆ) ನೀಡಲಾಗುವುದು.  ಪಿಎಚ್‌.ಡಿ: 28 ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡಲಾಗುವುದು. ತಾವೆಲ್ಲರೂ ದಯವಿಟ್ಟು ಸುವರ್ಣ ವಿಧಾನಸೌಧದಲ್ಲಿ ತಮಗಾಗಿ ಕಾಯ್ದಿರಿಸಿದ ಸ್ಥಳಗಳಲ್ಲಿ ಆಸೀನರಾಗಿ, ಘಟಿಕೋತ್ಸವವನ್ನು ವೀಕ್ಷಿಸಿ, ತಮ್ಮ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ವರದಿ ಮಾಡಬೇಕೆಂದು ಈ ಮೂಲಕ ವಿನಂತಿಸುತ್ತೇವೆ.