ಸರದಾರ ವಲ್ಲಭಾಯಿ ಪಟೇಲರ 144ನೇಯ ಜಯಂತಿ ಆಚರಣೆ

ಲೊಕದರ್ಶನ ವರದಿ

ಮೋಳೆ: ಭಾರತ ದೇಶದ ಸ್ವಾತಂತ್ರ್ಯ ಹೋರಾಟಗಾರರು, ವೃತ್ತಿಯಲ್ಲಿ ವಕೀಲರು, ಗಾಂಧಿ ಅನುಯಾಯಿ ಭಾರತದ ಪ್ರಥಮ ಗ್ರಹಮಂತ್ರಿಯಾಗಿ ವಿವಿಧ ಬಗೆಯ ಪಾತ್ರಗಳನ್ನು ನಿರ್ವಹಿಸಿದ ಎಕೈಕ ವ್ಯಕ್ತಿ ಎಂದರೆ ಸರದಾರ ವಲ್ಲಭಾಯಿ ಪಟೇಲ.  ಪಟೇಲರು ಸ್ವಾತಂತ್ರ್ಯ ಹೋರಾಟದಲ್ಲಿ ಮಂದಗಾಮಿಗಳಲ್ಲಿ ಒಬ್ಬರು.  ಅವರು 1928 ರಲ್ಲಿ ಗುಜರಾತಿನ ಬಾದರ್ೊಲಿ ತಾಲೂಕಿನಲ್ಲಿ ಶಾಂತಿಯುತ ಚಳುವಳಿ ಮಾಡಿ, ಬ್ರಿಟಿಷರಿಂದ ಬಡ ರೈತರ  ಜಪ್ತುಮಾಡಲ್ಪಟ್ಟ ಆಸ್ತಿ, ಜಮೀನು, ಮನೆಗಳನ್ನು ಹಿಂದಿರುಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಅವರು ಕರ ನಿರಾಕರಣ ಚಳುವಳಿ ಮೂಲಕ ಜಗತ್ಪ್ರಸಿದ್ಧಿಯನ್ನು  ಹೊಂದಿದರು ಎಂದು ಡಾ.ಎಸ್.ಎ.ಕಕರ್ಿಯವರು ಹೇಳಿದರು. 

   ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ ಹಾಗೂ ಸರದಾರ ವಲ್ಲಭಾಯಿ ಪಟೇಲರ 144 ನೇ ಜನ್ಮ ಜಯಂತಿ ಆಚರಣೆಯ ಸಂದರ್ಭದಲ್ಲಿ  ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಅವರು ಮುಂದುವರೆದು 565 ಸಂಸ್ಥಾನಗಳ ರಾಜರ ಮನವೊಲಿಸಿ, ಒಕ್ಕೂಟ ಭಾರತವನ್ನು ನಿಮರ್ಿಸಲು ಪ್ರಮುಖ ಪಾತ್ರ  ವಹಿಸಿದರು. ಪಟೇಲರಿಗೆ ಭಾರತ ಸರಕಾರ 1991 ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿತು.  ಭಾರತದ ಉಕ್ಕಿನ ಮನುಷ್ಯ ಹಾಗೂ ಭಾರತದ ಬಿಸ್ಮಾರ್ಕ ಎಂಬ ಬಿರುದುಗಳನ್ನು ಅವರು ಪಡೆದಿದ್ದರು ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಪ್ರಾಚಾರ್ಯ ಡಾ.ಎಸ್.ಓ.ಹಲಸಗಿಯವರು ಮಾತನಾಡುತ್ತಾ ಸರದಾರ ವಲ್ಲಭಾಯಿ ಪಟೇಲರು ವ್ಯಕ್ತಿಗತ ವಿಚಾರ ಮಾಡದೇ ದೇಶದ ಹಿತಕ್ಕಾಗಿ ತಮ್ಮನ್ನು ಅಪರ್ಿಸಿಕೊಂಡಿದ್ದರು. ಅವರು ದೇಶಕ್ಕಾಗಿ ನಿಸ್ವಾರ್ಥ ಸೇವೆ, ತ್ಯಾಗ, ಬಲಿದಾನದ ಪ್ರತಿಕವಾಗಿದ್ದರು.  ಇವತ್ತು ಜಗತ್ತಿನ ಅತೀ ಎತ್ತರವಾದ ಪ್ರತಿಮೆ ಎಂದರೆ ಅದು ಸರದಾರ ವಲ್ಲಭಾಯಿ ಪಟೇಲರ ಪ್ರತಿಮೆ. ಅವರ ಪ್ರತಿಮೆ 182 ಮೀಟರ್ ಎತ್ತರವನ್ನು ಹೊಂದಿದೆ ಹಾಗೂ ಈ ಪ್ರತಿಮೆ ವಿವಿಧತೆಯಲ್ಲಿ ಏಕತೆಯ ಪರಿಕಲ್ಪನೆಯನ್ನು  ಸೂಚಿಸುತ್ತದೆ ಎಂದು ಹೇಳಿದರು. 

ಪ್ರಾರಂಭದಲ್ಲಿ ಅಂಕಿತಾ ಪವಾರ ಮತ್ತು ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಎನ್.ಎಸ್.ಎಸ್. ಕೇಂದ್ರ ಘಟಕದ  ಅಧಿಕಾರಿಗಳಾದ ಡಾ.ಆರ್.ಎಸ್. ಕಲ್ಲೋಳಿಕರ ಸ್ವಾಗತಿಸಿದರು.  ಪ್ರೊ. ಜೆ.ಕೆ.ಪಾಟೀಲ ಕಾರ್ಯಕ್ರಮ ನಿರೂಪಿಸಿದರು.  ಪ್ರೊ.ವಿ.ಬಿ.ಬುಲರ್ೆ ರಾಷ್ಟ್ರೀಯ ಏಕತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಡಾ.ಎಸ್.ಪಿ.ತಳವಾರ ವಂದಿಸಿದರು. 

ವೇದಿಕೆಯ ಮೇಲೆ ಉಪ ಪ್ರಾಚಾರ್ಯ ಪ್ರೊ.ಎಸ್.ಎಸ್.ಬಾಗನೆ, ಎನ್.ಎಸ್.ಎಸ್. ರಾಜ್ಯ ಘಟಕದ ಅಧಿಕಾರಿಗಳಾದ ಪ್ರೊ. ಬಿ.ಡಿ.ಧಾಮಣ್ಣವರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು  ವಿದ್ಯಾಥರ್ಿ ವಿದ್ಯಾಥರ್ಿನಿಯರು ಉಪಸ್ಥಿತರಿದ್ದರು.