ಸಿಯೋಲ್, ಏಪ್ರಿಲ್ 20,ದಕ್ಷಿಣ ಕೊರಿಯಾದಲ್ಲಿ ಕೊವಿಡ್-19 ನ 13 ಹೊಸ ಪ್ರಕರಣಗಳು ವರದಿಯಾಗಿದ್ದು, ಸ್ಥಳೀಯ ಕಾಲಮಾನ ಸೋಮವಾರ ಮಧ್ಯರಾತ್ರಿಯ ವೇಳೆಗೆ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 10,674 ಕ್ಕೆ ಏರಿದೆ.ದಿನವೊಂದರಲ್ಲಿ ವರದಿಯಾಗುತ್ತಿರುವ ಪ್ರರಣಗಳ ಸಂಖ್ಯೆ ಸತತ ಎಂಟನೇ ದಿನ 30 ಕ್ಕಿಂತ ಕಡಿಮೆ ಸಂಖ್ಯೆಯಲ್ಲಿದೆ. ಹೊಸ ಪ್ರಕರಣಗಳ ಪೈಕಿ ಏಳು ಪ್ರಕರಣಗಳು ವಿದೇಶದಿಂದ ಬಂದ ವ್ಯಕ್ತಿಗಳಾಗಿದ್ದು, ಇಂತಹ ಒಟ್ಟು ಪ್ರಕರಣಗಳ ಸಂಖ್ಯೆ 1,006 ಕ್ಕೆ ಏರಿದೆ. ದೇಶದಲ್ಲಿ ಇನ್ನೂ ಎರಡು ಸಾವು ದೃಢಪಟ್ಟಿದ್ದು, ಸಾವಿನ ಸಂಖ್ಯೆ 236 ಕ್ಕೆ ಏರಿದೆ. ಒಟ್ಟು ಸಾವಿನ ಪ್ರಮಾಣ (ಒಟ್ಟು ಪ್ರಕರಣಗಳ ಪೈಕಿ) ಶೇ 2.21 ರಷ್ಟಿದೆ.ಸಂಪೂರ್ಣ ಚೇತರಿಸಿಕೊಂಡ ನಂತರ ಒಟ್ಟು 72 ರೋಗಿಗಳನ್ನು ಸಂಪರ್ಕತಡೆಯಿಂದ ಬಿಡುಗಡೆ ಮಾಡಲಾಗಿದ್ದು, ಇದರೊಂದಿಗೆ ಗುಣಮುಖರಾದವರ ಸಂಖ್ಯೆ 8,114 ಕ್ಕೆ ಏರಿದೆ. ಗುಣಮುಖರಾದವರ ಪ್ರಮಾಣ ಶೇ 76ರಷ್ಟಿದೆ. ಮೊದಲ 30 ಪ್ರಕರಣಗಳನ್ನು ಹೊರತುಪಡಿಸಿ, ಎಲ್ಲಾ ಸೋಂಕು ಪ್ರಕರಣಗಳು ಫೆಬ್ರವರಿ 18 ರಿಂದ ವರದಿಯಾಗಿದೆ. ದೇಶದಲ್ಲಿ ನಾಲ್ಕು ಹಂತದ ವೈರಸ್ ಎಚ್ಚರಿಕೆಯನ್ನು ‘ಕೆಂಪು’ ಮಟ್ಟಕ್ಕೆ ಏರಿಸಲಾಗಿದೆ.ಸಿಯೋಲ್‌ನ ಆಗ್ನೇಯಕ್ಕೆ 300 ಕಿ.ಮೀ ದೂರದಲ್ಲಿರುವ ಡೇಗು ಮತ್ತು ಅದರ ಈ ಪ್ರಾಂತ್ಯವನ್ನು ಸುತ್ತುವರಿದ ಉತ್ತರ ಜಿಯೊಂಗ್‌ಸಾಂಗ್ ಪ್ರಾಂತ್ಯದಲ್ಲಿ ಒಟ್ಟು ಸೋಂಕುಗಳ ಸಂಖ್ಯೆ ಕ್ರಮವಾಗಿ 6,833 ಮತ್ತು 1,361ರಷ್ಟಿದೆ. ಇದು ದೇಶದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆಯ ಶೇ 80ರಷ್ಟಿದೆ.
ಸಿಯೋಲ್ ಮತ್ತು ನೆರೆಯ ಜಿಯೊಂಗ್ಗಿ ಪ್ರಾಂತ್ಯದಲ್ಲಿ ಪ್ರಕರಣಗಳ ಸಂಖ್ಯೆ ಕ್ರಮವಾಗಿ 624 ಮತ್ತು 656ರಷ್ಟಿದೆ. 2.5 ದಶಲಕ್ಷ ಜನಸಂಖ್ಯೆ ಹೊಂದಿರುವ ಡೇಗು ಮಹಾನಗರದಲ್ಲಿ ಅತಿಹೆಚ್ಚು ಸೋಂಕು ಪ್ರಕರಣಗಳು ಕಂಡುಬಂದಿದ್ದರಿಂದ ಇದು ವೈರಸ್ ಹರಡುವಿಕೆಯ ಕೇಂದ್ರಬಿಂದುವೆನಿಸಿದೆ. ಡೇಗು ನಗರವನ್ನು ಸರ್ಕಾರ ‘ವಿಪತ್ತು ವಿಶೇಷ ವಲಯ’ ಎಂದು ಘೋಷಿಸಿದೆ.