ತಾಲೂಕಾನ್, ಅಫ್ಘಾನಿಸ್ತಾನ, ಅ 03 : ಉತ್ತರ ತಖಾರ್ ಪ್ರಾಂತ್ಯದ ಬಹರಕ್ ಜಿಲ್ಲೆಯಲ್ಲಿ ಕನಿಷ್ಠ 13 ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ಪ್ರದೇಶದಿಂದ ಉಗ್ರರನ್ನು ಹೊರಹಾಕುವ ಕಾಯರ್ಾಚರಣೆ ಮುಂದುವರೆದಿದೆ ಎಂದು ಸೇನೆಯ ಹೇಳಿಕೆ ತಿಳಿಸಿದೆ. ತಖಾರ್ನ ಪ್ರಾಂತೀಯ ರಾಜಧಾನಿ ತಾಲೂಕನ್ ನಗರದ ಸುತ್ತಲೂ ತಾಲಿಬಾನ್ ಉಗ್ರರು ದಾಳಿಗೆ ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಬುಧವಾರ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಸಶಸ್ತ್ರ ಉಗ್ರರು ತಾಲೂಕಾನ್ ಗಡಿಯಲ್ಲಿ ಬಹರಕ್ ಜಿಲ್ಲೆಯ ಕೆಲವು ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ. ಉಪ ರಕ್ಷಣಾ ಸಚಿವ ಜನರಲ್ ಮೊಹಮ್ಮದ್ ಯಾಸಿನ್ ಜಿಯಾ ಅವರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಒಂಬತ್ತಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎನ್ನಲಾಗಿದೆ ತುಲನಾತ್ಮಕವಾಗಿ ತೊಂದರೆಗೀಡಾದ ಪ್ರಾಂತ್ಯವನ್ನು ದಂಗೆಕೋರರಿಂದ ತೆರವುಗೊಳಿಸುವವರೆಗೆ ಯುದ್ಧ ವಿಮಾನಗಳ ಬಳಕೆಯೊಂದಿಗೆ ಕಾರ್ಯಾಚರಣೆಗಳು ನಡೆಯುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಖವಾಜಾ, ಬಹರಕ್ ಮತ್ತು ಚಾಹ್ ಅಬ್ ಜಿಲ್ಲೆಗಳು ಸೇರಿದಂತೆ ತಖಾರ್ ಪ್ರಾಂತ್ಯದ ಕೆಲವು ಭಾಗಗಳಲ್ಲಿ ಅಡಗುದಾಣ ನಾಶ ಹಾಗೂ ಸಾವಿನ ಸಂಖ್ಯೆಯ ಕುರಿತು ತಾಲಿಬಾನ್ ಉಗ್ರ ಸಂಘಟನೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.