ಕೊಪ್ಪಳ 12: ನಗರದ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕದವತಿಯಿಂದ 125ನೇ ಚಿಕಾಗೋ ಸರ್ವ ಧರ್ಮ ಸಮ್ಮೇಳನದ ಸಂಭ್ರಮಾಚರಣೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಚಿಕಾಗೋ ವಿಶ್ವ ಧರ್ಮದ ಹಿನ್ನೆಲೆ ಹಾಗೂ ಸ್ವಾಮಿ ವಿವೇಕಾನಂದರು ಚಿಕಾಗೋ ತಲುಪಿದ ರೀತಿಯನ್ನು ವಿವರಿಸುತ್ತ ಪ್ರಾಧ್ಯಾಪಕರಾದ ಶರಣಬಸಪ್ಪ ಬಿಳೆಯಲಿಯವರು ಸ್ವಾಮಿ ವಿವೇಕಾನಂದರು ಭಾರತದ ಇತಿಹಾಸದಲ್ಲಿಯೇ ಅತಿ ಹೆಚ್ಚು ಜನರಿಗೆ ಸ್ಫೂತರ್ಿ ಪ್ರೇರಣೆಯನ್ನು ನೀಡಿದ ಧೀಮಂತ ವ್ಯಕ್ತಿಯಾಗಿದ್ದಾರೆ. ಇವರಿಂದ ಪ್ರೇರಿತಗೊಂಡವರಲ್ಲಿ ಮಹಾತ್ಮ ಗಾಂಧೀಜಿ, ರವೀಂದ್ರನಾಥ ಠಾಗೋರ್, ನೇತಾಜಿ ಸುಭಾಷಚಂದ್ರ ಭೋಸ, ಜವಾಹಾರಲಾಲ ನೆಹರುಗಳಂತಹ ಸ್ವಾತಂತ್ರ ಹೋರಾಟಗಾರರಲ್ಲದೇ ಪಾಶ್ಚಾತ್ಯ ವಿಶ್ವವಿದ್ಯಾಲಯದ ಹಲವಾರು ದಿಗ್ಗಜ್ಜರಿಗೆ ಸ್ವಾಮಿ ವಿವೇಕಾನಂದ ಪ್ರೇರಣೆಯಾಗಿದ್ದಾರೆ.
ಚಿಕಾಗೋ ಧರ್ಮ ಸಮ್ಮೇಳನ ಜಾಗತಿಕ ಇತಿಹಾಸದಲ್ಲಿ ಒಂದು ಮೈಲುಗಲ್ಲು. ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಇಡೀ ಭಾರತವನ್ನು ಪ್ರತಿನಿಧಿಸಿ ಭಾರತದ ಇತಿಹಾಸದ ಪರಂಪರೆ, ಧಾಮರ್ಿಕ ಸಂಹಿಷ್ಣುತೆ, ಜಾತ್ಯಾತೀತ ಮನೋಭಾವ, ಸರ್ವ ಧರ್ಮವನ್ನು ಗೌರವಿಸುವ ಸತ್ವಯುತವಾದ ಗುಣಗಳನ್ನು ವಿವರಿಸಿದರು.
ಇನ್ನೋರ್ವ ಉಪನ್ಯಾಸಕರಾದಂತಹ ಪ್ರೊ. ಶಿವನಗೌಡ ಪಾಟೀಲರವರು ಮಾತನಾಡುತ್ತ ಸ್ವಾಮಿ ವಿವೇಕಾನಂದರು ಬಾಲ್ಯದಿಂದಲೇ ತಮ್ಮ ಗುರಿಗಳನ್ನು ಗುರುತಿಸಿಕೊಂಡು ಗುರುವಿನ ಮಾರ್ಗದರ್ಶನದಲ್ಲಿ ಬೆಳೆದು ಭಾರತದ ಅಧ್ಯಾತ್ಮಿಕ ಪರಂಪರೆಯಲ್ಲಿ ಚಿರಸ್ಮರಣೀಯರಾಗಿದ್ದಾರೆ. ಇಂತಹ ಅಧ್ಯಾತ್ಮಿಕ ವಿಚಾರಧಾರೆಯನ್ನು ಪರಿಣಾಮಕಾರಿಯಾಗಿ ಪ್ರಭಾವಶಾಲಿಯಾಗಿ ಇಡೀ ಜಗತ್ತಿಗೆ ಪ್ರದಶರ್ಿಸುವ ವೇದಿಕೆಯನ್ನಾಗಿ ಚಿಕಾಗೋ ಸಮ್ಮೇಳನವನ್ನು ಉಪಯೋಗಿಸಿಕೊಂಡು ಸಮ್ಮೇಳನದಲ್ಲಿ ನೆರೆದ ಎಲ್ಲರ ಮೆಚ್ಚುಗಿಗೆ ಪಾತ್ರರಾದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಎಂ.ಎಸ್.ದಾದ್ಮಿಯವರು ವಹಿಸಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕೆಂದರು. ವೇದಿಕೆಯ ಮೇಲೆ ಎಂ.ಎಸ್.ಬಚಲಾಪೂರ, ಡಾ. ಬಸವರಾಜ ಪೂಜಾರ, ರಾಜು ಹೊಸಮನಿ, ಅರುಣಕುಮಾರ ಎ.ಜಿ, ಆದೇಶ ಮತ್ತು ಇತರ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕು.ಕಾವೇರಿ, ಗೀತಾ, ಅಶ್ವಿನಿ ಪ್ರಾರ್ಥನೆ ಗೈದರು. ಮಂಜುನಾಥ, ಹೇಮಂತಕುಮಾರ, ಶ್ರೀಶೈಲ ಹಾಗೂ ಶರಣಪ್ಪ ಕಾರ್ಯಕ್ರಮವನ್ನು ಸಂಘಟಿಸಿದರು.