120ನೇ ಕುವೆಂಪು ಜನ್ಮದಿನ ವಿಶ್ವ ಮಾನವ ಕುವೆಂಪು ನಾಡಿನ ಶ್ರೇಷ್ಠ ಸಾಹಿತಿ ಅಬ್ದುಲ್ ನಬಿ
ಸಿರುಗುಪ್ಪ 30: ವಿಶ್ವ ಮಾನವ ಕುವೆಂಪು ನಾಡಿನ ಶ್ರೇಷ್ಠ ಸಾಹಿತಿ ತತ್ವಜ್ಞಾನಿ ವಿಶ್ವಮಾನವ ಸಂದೇಶ ಸಾರಿದ ಕನ್ನಡದ ಪ್ರಥಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಕುವೆಂಪು ಅವರ ಸಾಹಿತ್ಯದ ಕೊಡುಗೆ ಅಪಾರ ಎಂದು ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸೆಂಟ್ರಲ್ ಮೈಸೂರು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಸಾಕ್ಷರತಾ ಜನಾಭಿಪ್ರಾಯ ಮುಖಂಡ ಹಿರಿಯ ಸಾಹಿತಿ ಕವಿ ಅಬ್ದುಲ್ ನಬಿ ಅವರು ಅಭಿಪ್ರಾಯಪಟ್ಟರು.
ಸಿರುಗುಪ್ಪದಲ್ಲಿ ಕುವೆಂಪು ಅವರ 120ನೇ ಜನ್ಮದಿನವನ್ನು ಗೌರವಿಸಿ ನೆನಪಿಸಿ ಸ್ಮರಿಸಿ ಮಾತನಾಡುತ್ತಾ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ ಅತ್ಯಂತ ಮೌಲಿಕವಾಗಿದೆ ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರು ಪ್ರಾಂಶುಪಾಲರು ಆಗಿದ್ದರು ನಂತರ ಉಪಕುಲಪತಿಗಳಾದರು ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು ವಿಶ್ವ ವಿದ್ಯಾ ನಿಲಯವನ್ನು ಅಧ್ಯಯನಂಗ ಸಂಶೋಧನಾಂಗ ಹಾಗೂ ಪ್ರಸಾರಂಗ ಎಂಬುದಾಗಿ ವಿಭಾಗಿಸಿದರು.
ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು ಎಂದು ಅವರು ನುಡಿದರು ಮೇಲೆ ವಿಶೇಷ ಒಲವು ಹೊಂದಿ ಕನ್ನಡದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದವರು ಕುವೆಂಪು ಎಂದು ಅವರನ್ನು ಸಾಮಾಜಿಕ ಕಾರ್ಯಕರ್ತ ಸಾಹಿತಿಕವಿ ಅಬ್ದುಲ್ ನಬಿ ಸ್ಮರಿಸಿಕೊಂಡರು.