ನಗರಸಭೆಯ 12 ವಾಣಿಜ್ಯ ಮಳಿಗೆಗಳು ಬಹಿರಂಗ ಹರಾಜು
12 commercial stores of the municipality to be auctioned
ರಾಣೇಬೆನ್ನೂರ 27: ಸ್ಥಳೀಯ ನಗರಸಭೆಯ ವ್ಯಾಪ್ತಿಯಲ್ಲಿನ ಎಂ.ಜಿ. ರಸ್ತೆಯಲ್ಲಿನ ಒಟ್ಟು17 ಮಳಿಗೆಗಳಲ್ಲಿ 12 ಮಳಿಗೆಗಳು ಗುರುವಾರ ದಿವಸ ನಗರಸಭೆಯ ನಿಬಂಧನೆಗೊಳಪಟ್ಟು ಹರಾಜುಗೊಂಡವು.
ಎಂ.ಜಿ ರಸ್ತೆಯ ಮಳಿಗೆ ನಂಬರ 1, 10, 11, 14, 15, 16,18, 19, 20, 23, 25 ಮತ್ತು 33 ನೇ ನಂಬರಿನ ಮಳಿಗೆಗಳು ಬಹಿರಂಗ ಹರಾಜಾದವು. ಆದರೆ ಎಂಜಿ ರಸ್ತೆಯಲ್ಲಿನ 5 ಮತ್ತು ಮಾರುತಿ ನಗರದಲ್ಲಿನ 2 ಮಳಿಗೆಗಳಿಗೆ ಯಾವುದೇ ಠೇವಣಿ ಬಾರದೆ ಇರುವ ಕಾರಣ ಮಳಿಗೆಗಳು ಹರಾಜ್ ಆಗಲಿಲ್ಲ. ಪೌರಾಯುಕ್ತ ಎಫ್.ಐ. ಇಂಗಳಗಿ, ಕಂದಾಯಾಧಿಕಾರಿ ವಸಂತ ಪಿ, ಮಧು ಸಾತೇನಹಳ್ಳಿ ಸೇರಿದಂತೆ ಹರಾಜುಗಾರರು ಈ ಸಂದರ್ಭದಲ್ಲಿ ಇದ್ದರು.
ಇನ್ನುಳಿದಂತೆ ನಗರ ಸಭೆಗೆ ಸಂಬಂಧಿಸಿದ ಮಳಿಗೆ ಬಾಡಿಗೆದಾರರು, ಹಣ ತುಂಬಿದವರನ್ನು ಹೊರತುಪಡಿಸಿ ಈ ಕೂಡಲೇ ಬಾಡಿಗೆ ಹಣವನ್ನು ತುಂಬಲು ಮಾರ್ಚ್ 31, 2026 ಕೊನೆಯ ದಿನವಾಗಿದ್ದು ಈ ಕುರಿತು ಈಗಾಗಲೇ ನೋಟಿಸ್ ಮೂಲಕ ಸೂಚಿಸಲಾಗಿದೆ. ಎಂದು ಮಾಧ್ಯಮಕ್ಕೆ ತಿಳಿಸಿದರು. ಅಂತಿಮ ಸೂಚನೆ ಇದಾಗಿದ್ದು, ಸಂಬಂಧಿಸಿದಂತೆ ಬಾಡಿಗೆ ಉಳಿಸಿಕೊಂಡಿರುವವರು ಅವಧಿಯ ಒಳಗಾಗಿ ತಕ್ಷಣವೇ ಪಾವತಿಸಿ ಸಹಕರಿಸಬೇಕು ಇಲ್ಲವಾದಲ್ಲಿ, ಮುಂದೆ ನಡೆಯಬಹುದಾದ ಯಾವುದೇ ಹರಾಜಿನಲ್ಲಿ ಭಾಗವಹಿಸಲು ಅಂತವರಿಗೆ ಅವಕಾಶ ಇರುವುದಿಲ್ಲ. ಹರಾಜಿನಲ್ಲಿ ಭಾಗವಹಿಸಿದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕೆಗೆ ತಿಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 