ಬೆಂಗಳೂರು, ಮೇ 6,ಬಾಗಲಕೋಟೆಯ ಬಾದಾಮಿಯಲ್ಲಿ ಒಂದೇ ದಿನ 12 ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.607ನೇ ರೋಗಿಯ ಸಂಪರ್ಕಕ್ಕೆ ಬಂದಿದ್ದ 10 ಹಾಗೂ 15 ವರ್ಷದ ಬಾಲಕ ಸೇರಿ 45, 26, 47, 23, 32, 30 ವರ್ಷದ ವ್ಯಕ್ತಿಗಳು, 18 ವರ್ಷದ ಯುವತಿ, 55 ವರ್ಷದ ವೃದ್ಧೆ, 30 ವರ್ಷದ ಮಹಿಳೆ, 40 ವರ್ಷದ ಮಹಿಳೆ,16 ವರ್ಷದ ಯುವತಿಯಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 692ಕ್ಕೇರಿಕೆಯಾಗಿವೆ. ಒಟ್ಟು 30 ಮಂದಿ ಮೃತಪಟ್ಟಿದ್ದು, 345 ಜನರು ಚೇತರಿಕೆ ಕಂಡಿದ್ದಾರೆ. ಜೊತೆಗೆ, ದಕ್ಷಿಣ ಕನ್ನಡದ 11 ವರ್ಷದ ಬಾಲಕಿ, 35 ವರ್ಷದ ಮಹಿಳೆ, ದಕ್ಷಿಣ ಕನ್ನಡ ಭಂಟ್ವಾಳದ 16 ವರ್ಷದ ಯುವತಿ, ಬೆಂಗಳೂರು ನಗರದ 40 ವರ್ಷದ ಮಹಿಳೆ ಹಾಗೂ 25 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ.