ಚೀನಾದಲ್ಲಿ ಟೊಯೊಟೋ ಕಂಪೆನಿಯಿಂದ 12 ಸಾವಿರ ಆಲ್ಫಡರ್್ ಕಾರ್ ವಾಪಸ್

ಬೀಜಿಂಗ್, 23 (ಕ್ಸಿನ್ಹುವಾ) ಜಪಾನಿನ ಆಟೊಮೊಬೈಲ್ ಕಂಪೆನಿ ಟೊಯಾಟೋ ಚಾಜರ್ಿಂಗ್ ದೋಷದ ಕಾರಣ ಆಮದಾದು ಮಾಡಿಕೊಂಡಿದ್ದ ಆಲ್ಫಡರ್್ ಕಾರ್ ಗಳನ್ನು ಡಿಸೆಂಬರ್ 29 ರಿಂದ ಹಿಂಪಡೆಯಲಿದೆ ಎಂದು ಚೀನಾದ ಮಾರುಕಟ್ಟೆ ನಿಯಂತ್ರಕ ತಿಳಿಸಿದೆ.       2017 ರ ಡಿಸೆಂಬರ್ 11 ರಿಂದ 2019 ರ ಮಾಚರ್್ 29 ರ ವರೆಗೆ ತಯಾರಾದ ಆಲ್ಫಡರ್್ ಮಾದರಿ ಕಾರುಗಳನ್ನು ಟೊಯಾಟೋ ವಾಪಸ್ ಪಡೆಯಲಿದೆ. ಎಂಜಿನ್ ನಿಯಂತ್ರಣ ಗಣಕದಲ್ಲಿ ಚಾಜರ್ಿಂಗ್ ಪ್ರೋಗ್ರಾಮಿಂಗ್ ದೋಷದ ಹಿನ್ನಲೆಯಲ್ಲಿ ಬ್ಯಾಟರಿ ಹಾಳಾಗುವ ಅಪಾಯವಿದ್ದು ಕೆಲವೊಮ್ಮೆ ಎಂಜಿನ್ ಸರಿಯಾಗಿ ಸ್ಟಾಟರ್್ ಆಗುವುದಿಲ್ಲ. ಇವೆಲ್ಲಾ ಸುರಕ್ಷತಾ ಅಪಾಯಗಳನ್ನು ತರಬಲ್ಲದು ಎಂದು ಹೇಳಲಾಗಿದೆ.        ಈ ಪ್ರೋಗ್ರಾಂ ಗಳನ್ನು ಸರಿಪಡಿಸಿ, ಬ್ಯಾಟರಿಗಳನ್ನು ಪರೀಕ್ಷಿಸಿ, ವಾಹನದ ಬಿಡಿಭಾಗಗಳನ್ನು ಉಚಿತವಾಗಿ ದುರಸ್ತಿ ಮಾಡಿಕೊಡುವುದಾಗಿ ಕಂಪೆನಿ ತಿಳಿಸಿದೆ.