ಭಗತ್ ಸಿಂಗ್ ರವರ 113ನೇ ಜನ್ಮದಿನದ ಕಾರ್ಯಕ್ರಮ

ಧಾರವಾಡ:  ಕೆ.ಯು.ಪಿ.ಯು ಕಾಲೇಜಿನಲ್ಲಿ ಭಗತ್ ಸಿಂಗ್ ರವರ 113ನೇ ಜನ್ಮದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

         ಈ ಕಾರ್ಯಕ್ರಮವನ್ನುದ್ಧೇಶಿಸಿ ಎಐಡಿಎಸ್ಓ ನ ಜಿಲ್ಲಾ ಕಾರ್ಯದರ್ಶಿಗಳಾದ ರಣಜೀತ್ ಧೂಪದ ಮಾತನಾಡಿ ಭಗತ್ ಸಿಂಗ್ರವರಿಗೆ ತಮ್ಮ ಮನೆಯಲ್ಲಿನ ಸ್ವಾತಂತ್ರ್ಯ ಹೋರಾಟದ ವಾತಾವರಣದ ಪ್ರಭಾವದಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು ಅವರ ಆ ಹೋರಾಟದ ಕೆಚ್ಚಿಗೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಘಟನೆ ಇನ್ನಷ್ಟು ಪುಷ್ಠಿ ಕೊಟ್ಟಿತು. ಅಲ್ಲಿಂದ ಗಾಂಧಿಜೀಯವರ ನೇತೃತ್ವದಲ್ಲಿ ನಡೆದ ಅಸಹಕಾರ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಆದರೆ ಆ ಚಳುವಳಿಯನ್ನು ಗಾಂಧಿಜೀಯವರು ಹಿಂತೆಗೆದುಕೊಂಡಿದ್ದರಿಂದ ನಿರಾಸೆಯಾಯಿತು. 

ನಂತರ ಎಚ್ಆರ್ಎ ಯನ್ನು ಸೇರಿದರು. ತಮ್ಮ ವಿಚಾರಗಳನ್ನು ದೇಶದ ಜನತೆಗೆ ಮುಟ್ಟಿಸಲು ಅಸೆಂಬ್ಲಿಯ ಖಾಲಿ ಜಾಗದಲ್ಲಿ ಬಾಂಬ್ ಸ್ಪೋಟಿಸಿ ಬಂಧಿತರಾಗಿ ಕೊರ್ಟ ವಿಚಾರಣೆಯನ್ನೆ ತಮ್ಮ ಪ್ರಚಾರದ ವೇದಿಕೆಯನ್ನಾಗಿಸಿಕೊಂಡು ಇಡೀ ದೆಶಕ್ಕೆ ತಮ್ಮ ವಿಚಾರಗಳನ್ನು ಮುಟ್ಟಿಸಿದರು. ಇದನ್ನರಿತ ಬ್ರಿಟಿಷರು ವಿಚಾರಣೆಯ ನಾಟಕವಾಡಿ, ಇವರು ಕೊರ್ಟನಲ್ಲಿ ಇರದೆ ತೀರ್ಪು ನೀಡಿ ಗಲ್ಲಿಗೇರಿಸಿದರು.

           ಭಗತ್ ಸಿಂಗ್ರವರದು ಭಾರತಕ್ಕೆ ಬರೀ ಬ್ರಿಟಿಷರಿಂದ ಸ್ವಾತಂತ್ರ ಪಡೆಯುವುದೊಂದೆ ಉದ್ಧೇಶವಾಗಿರಲಿಲ್ಲ. ಸ್ವತಂತ್ರ ಬಂದ ಮೇಲೆ ನಮ್ಮನ್ನು ಯಾರು ಆಳುತ್ತಾರೆನ್ನುವುದು ಬಹಳ ಮುಖ್ಯ, ಈ ಸ್ವಾತಂತ್ರ್ಯ ಬರೀ ಶ್ರೀಮಂತರ ಪಾಲಾದರೆ ಇಲ್ಲಿನ ಸಾಮಾನ್ಯ ಜನಗಳ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಆ ಜನರ ಜೀವನ ಸುಧಾರಿಸುವುದಿಲ್ಲ. ಈ ದೇಶದಲ್ಲಿ ಎಲ್ಲರಿಗೂ ಶಿಕ್ಷಣ, ಆರೋಗ್ಯ, ಜೀವನದ ಭದ್ರತೆ ಸಿಗಬೇಕು, ಭಾರತವು ಒಂದು ಸಮಾಜವಾದಿ ರಾಷ್ಟ್ರವಾಗಬೇಕು ಎಂಬುದು ಅವರ ಕನಸಾಗಿತ್ತು. ಆದರೆ ಇಂದಿನ ಪರಿಸ್ಥಿತಿ ನೋಡಿದರೆ ಭಗತ್ ಸಿಂಗ್ರ ಕನಸು ಕನಸಾಗಿಯೆ ಉಳಿದಿದೆ. 

ದೇಶದ ಜನಸಾಮಾನ್ಯರ ಬದುಕು ದಿನೇ ದಿನೇ ದುಸ್ಥರವಾಗುತ್ತಿದೆ, ಈ ದೇಶದ ಇಂತಹ ಪರಿಸ್ಥಿತಿಯನ್ನು ಬದಲಾಯಿಸಬೇಕಾದರೆ ಭಗತ್ ಸಿಂಗ್ರ ವಿಚಾರಗಳು ಅವಶ್ಯಕ. ಈ ವಿಚಾರಗಳನ್ನು ಹೆಚ್ಚು ಹೆಚ್ಚು ಅರ್ಥ ಮಾಡಿಕೊಂಡು ಎಲ್ಲೆಡೆ ಹರಡಬೇಕು ಈ ಕೆಲಸಕ್ಕಾಗಿ ವಿದ್ಯಾರ್ಥಿ ಯುವಜನರು ಮುಂದೆಬರಬೇಕು ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಎಐಡಿಎಸ್ಓ ನ ಜಂಟಿ ಕಾರ್ಯದರ್ಶಿಳಾದ ಶಶಿಕಲಾ ಮೇಟಿ ವಹಿಸಿಕೊಂಡಿದ್ದರು, ಕಾರ್ಯಕಾರಿ ಸಮಿತಿಯ ಸದಸ್ಯರಾದ ದೀಪಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ರಾಜಶೇಕರ, ಮಲ್ಲಿನಾಥ, ಲಕ್ಷ್ಮೀ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.