ಕಾಸರಗೋಡು, ಫೆ 5, ಸೀಮಾಸುಂಕ ಅಧಿಕಾರಿಗಳು ಇಲ್ಲಿನ ಬೇಕಲ್ ಬಳಿ ಕಾರೊಂದರಲ್ಲಿ ಕಳ್ಳಸಾಗಾಣಿಕೆ ಮಾಡಿದ್ದ 10 ಕೆಜಿ ಚಿನ್ನವನ್ನು ಬುಧುವಾರ ಮುಟ್ಟುಗೋಲು ಹಾಕಿಕೊಂಡಿದ್ದಾರೆ.ಖಚಿತ ಮಾಹಿತಿ ಆಧರಿಸಿ ಸೀಮಾಸುಂಕ ಅಧಿಕಾರಿಗಳು ಬೇಕಲ್ ಬಳಿ ಕಾರೊಂದರಲ್ಲಿ ಕೆಲವರು ಕೇರಳಕ್ಕೆ ಕಳ್ಳಸಾಗಾಣಿಕೆ ಮಾಡುತ್ತಿದ್ದ ಚಿನ್ನವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.