ಮಹಾ ಕುಂಭಮೇಳದಲ್ಲಿ ಭಕ್ತಿಭಾವದಿಂದ ಮಿಂದೆದ್ದ ಬೆಳಗಾವಿಯ 100 ಜನ ಯಾತ್ರಿಕರು
ಬೆಳಗಾವಿ 24 : ದಿ. 14ರಂದು ಭವ್ಯ ಭಾರತ ಯಾತ್ರಾ ಕಂಪನಿ, ವೈಷ್ಣೋದೇವಿ ಟೂರ್ಸ್ ಆಂಡ್ ಟ್ರಾವೆಲರ್ಸ್ ಬೆಳಗಾವಿ ವತಿಯಿಂದ ಹಿರಿಯ ಸಾಹಿತಿ ಡಾ. ಸಿ. ಕೆ. ಜೋರಾಪೂರ ಅವರ ಮಾರ್ಗದರ್ಶನದಲ್ಲಿ ಪ್ರಯಾಗರಾಜ್, ಕಾಶಿ, ಅಯೋಧ್ಯೆ, ಪರಳಿ ವೈಜನಾಥ, ಓಂದ ನಾಗನಾಥ, ಮೇಹರ ಶಾರದಾ ಮಾತಾ ದರ್ಶನ, ತುಳಜಾಭವಾನಿ ದರ್ಶನ ಹೀಗೆ ಇತರ ಪವಿತ್ರ ಕ್ಷೇತ್ರಗಳಿಗೆ ಬೆಳಗಾವಿಯಿಂದ ಹೊರಟ ನೂರು ಜನ ಯಾತ್ರಾರ್ಥಿಗಳು ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ಪ್ರಯಾಗರಾಜದಲ್ಲಿ ಮಿಂದೆದ್ದು ಪುನೀತರಾದರು. ಯಾತ್ರಾರ್ಥಿಗಳು ಬೆಳಗಾವಿಯಿಂದ ಹೊರಡುವ ಮುನ್ನ ರಾಮತೀರ್ಥ ನಗರದ ಶಿವಾಲಯದಲ್ಲಿ ಸರ್ವ ಯಾತ್ರಿಕರಿಗೆ ಬ್ಯಾಡ್ಜಸ್, ಹುಗುಚ್ಚ ನೀಡಿ ಬೀಳ್ಕೊಡಲಾಯಿತು. ರಾಮತೀರ್ಥ ನಗರದ ಹಿರಿಯರಾದ ಹಾಗೂ ಶಿವಾಲಯದ ಚೇರಮನರಾದ ಎಸ್. ಎಸ್. ಕಿವುಡಸಣ್ಣವರ ಅಧ್ಯಕ್ಷತೆಯಲ್ಲಿ ಹಾಗೂ ಮುಖಂಡರಾದ ನಿರುಪಾದಯ್ಯ ಕಲ್ಲೋಳಿಮಠ, ಸುರೇಶ ಯಾದವ, ಮಹಾಂತೇಶ ವಕ್ಕುಂದ, ಈರಯ್ಯ ಖೋತ, ವ್ಹಿ.ಕೆ. ಬಡಿಗೇರ ಮತ್ತು ರಾಮತೀರ್ಥ ನಗರದ ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಸಿ.ಎಸ್. ಬಿಡ್ನಾಳ, ಯುವರಾಜ ಚೌಧರಿ, ಉದಯಕಾಲ ದಿನಪತ್ರಿಕೆಯ ಸಹ ಸಂಪಾದಕರಾದ ರಜನಿಕಾಂತ ಯಾದವಾಡೆ, ರಾಮತೀರ್ಥ ನಗರದ ಸಿದ್ಧಿವಿನಾಯಕ ಮಂದಿರದ ಪದಾಧಿಕಾರಿಗಳು, ಬಸವೇಶ್ವರ ಬಡಾವಣೆಯ ಬಸವ ಬಳಗ ಹಾಗೂ ಪಂಚದೇವರ ಕಮೀಟಿಯವರು, ಹೀಗೆ ಹಲವು ಮುಖಂಡರ ಸಮ್ಮುಖದಲ್ಲಿ ಯಾತ್ರಾರ್ಥಿಗಳಿಗೆ ಶುಭ ಹಾರೈಸಿ ಬೀಳ್ಕೊಡಲಾಯಿತು. ಫೆ.18 ರಂದು ಪ್ರಯಾಗರಾಜದಲ್ಲಿ ಭಾಗಿಯಾದ ಯಾತ್ರಾರ್ಥಿಗಳು 144 ವರ್ಷಕ್ಕೊಮ್ಮೆ ಬರುವ ಮಹಾ ಕುಂಭಮೇಳದಲ್ಲಿ ನಾವು ಸಾಕ್ಷಿಯಾದೇವು ಎಂದು ತುಂಬಾ ಹರ್ಷಗೊಂಡರು. ಪ್ರಯಾಗರಾಜ ನಂತರ ಅಯೋಧ್ಯೆ, ಕಾಶಿ, ಮೇಹರ ಶಾರದಾ ಮಾತಾ ದರ್ಶನ ಪಡೆದು ಫೆ.24ರಂದು ಎಲ್ಲ ಯಾತ್ರಿಕರು ಬೆಳಗಾವಿಗೆ ಸುರಕ್ಷಿತವಾಗಿ ಮರಳಿದರು ಎಂದು ವೈಷ್ಣೋದೇವಿ ಟೂರ್ಸ್ ಆಂಡ್ ಟ್ರಾವೆಲರ್ಸ್ ಬೆಳಗಾವಿಯ ಸಂಚಾಲಕರಾದ ಪ್ರಹ್ಲಾದಕುಮಾರ ಜೋರಾಪೂರ, ಕೇದಾರನಾಥ ಜೋರಾಪೂರ ಅವರು ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.