ಭುವನೇಶ್ವರ, ಡಿ28, 2022ರ ವೇಳೆಗೆ 100 ಗಿಗಾ
ವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಭಾರತ ಹೊಂದಿದೆ ಎಂದು ಭಾರತೀಯ ಸೌರ ವಿದ್ಯುತ್ ನಿಗಮ(ಎಸ್‍ಪಿಸಿಐ)ದ
ವ್ಯವಸ್ಥಾಪಕ ನಿರ್ದೇಶಕ ಜತೀಂದ್ರನಾಥ್ ಸ್ವೈನ್ ತಿಳಿಸಿದ್ದಾರೆ. ನಗರದ ಎಸ್‍ಒಎ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ
ಶನಿವಾರ ಆಯೋಜಿಸಲಾಗಿದ್ದ ‘ ಇಂಧನ ಸವಾಲುಗಳು ಮತ್ತು ಭರವಸೆಗಳು’ ಕುರಿತ ರಾಷ್ಟ್ರೀಯ ಸಮಾವೇಶವನ್ನು
ಉದ್ದೇಶಿಸಿ ಮಾತನಾಡಿದ ಅವರು, ಸೌರ ವಿದ್ಯುತ್ ವಲಯ ಸುದೀರ್ಘ ಹಾದಿ ಸಾಗಿದ್ದು, ಸದ್ಯ ಭಾರತದಲ್ಲಿ
32 ಗಿಗಾ ವ್ಯಾಟ್ ವಿದ್ಯುತ್ ಸಾಮಥ್ರ್ಯವಿದೆ. ಇನ್ನೂ 18 ಗಿಗಾ ವ್ಯಾಟ್ ಉತ್ಪಾದನೆಯ ಸ್ಥಾವರಗಳನ್ನು
ಸ್ಥಾಪಿಸಲಾಗುತ್ತಿದೆ. ಉಳಿದಂತೆ 24 ಗಿಗಾ ವ್ಯಾಟ್ ಸಾಮಥ್ರ್ಯದ ಸ್ಥಾವರಗಳು ಸ್ಥಾಪನೆಯವ ವಿವಿಧ ಹಂತಗಳಲ್ಲಿವೆ
ಎಂದು ಹೇಳಿದರು. ‘ಮೂರು ವರ್ಷಗಳ ನಂತರ 100 ಗಿಗಾ
ವ್ಯಾಟ್ ಸೌರ ವಿದ್ಯುತ್ ಉತ್ಪಾದನೆಯಾಗುವ ಎಲ್ಲ ಸಾಧ್ಯತೆಗಳಿವೆ. ಸೌರ ವಿದ್ಯುತ್ ದರ ಯುನಿಟ್‍ಗೆ
2.44ರೂ.ಗೆ ಇಳಿದೆ. ಸೌರ ವಿದ್ಯುತ್, ಶಾಖೋತ್ಪನ್ನ ವಿದ್ಯುತ್‍ಗಿಂತಲೂ ಅಗ್ಗ.’ ಎಂದು ಸ್ವೈನ್ ಹೇಳಿದರು.
ಸಮಾವೇಶವನ್ನು ಎಸ್‍ಒಎ ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಬರ್ಹಾಂಪುರ ರಾಷ್ಟ್ರೀಯ ವಿಜ್ಞಾನ ಮತ್ತು
ತಂತ್ರಜ್ಞಾನ ಸಂಸ್ಥೆಗಳು ಭಾರತೀಯ ಇಂಧನ ಕಾಂಗ್ರೆಸ್ (ಐಇಸಿ)ನೊಂದಿಗೆ ಸಮಾವೇಶವನ್ನು ಆಯೋಜಿಸಿದ್ದವು.