ನಿಸ್ಸಾರ್ ಅಹಮದ್ ಪುತ್ರದ ಚಿಕಿತ್ಸೆಗೆ ಪಾಲಿಕೆಯಿಂದ 10 ಲಕ್ಷ ರೂ. ನೆರವು

ಬೆಂಗಳೂರು, ಜ 8, ಅನಾರೋಗ್ಯದಿಂದ ಬನ್ನೇರಘಟ್ಟ ಮುಖ್ಯರಸ್ತೆ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಿತ್ಯೋತ್ಸವ ಕವಿ ಪ್ರೊ. ನಿಸ್ಸಾರ್ ಅಹಮದ್ ರವರ ಪುತ್ರ ನವೀದ್ ಅವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ 10 ಲಕ್ಷ ರೂ. ನೆರವು ನೀಡಲಾಯಿತು.ಮಹಾಪೌರರಾದ ಗೌತಮ್ ಕುಮಾರ್ ಅವರು ಬುಧವಾರ ಈ ಹಣದ ಚೆಕ್ ಹಸ್ತಾಂತರಿಸಿದರು. ಉಪಮಹಾಪೌರರಾದ ರಾಮ ಮೋಹನ ರಾಜು, ಪಾಲಿಕೆ ಸದಸ್ಯ ಎಲ್.ಶ್ರೀನಿವಾಸ್ ಉಪಸ್ಥಿತರಿದ್ದರು.